ಲಿಫ್ಟ್ ಒಳಗೆ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು ಶ್ರೀನಿವಾಸ್(40) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾಲ್ನಲ್ಲಿರುವ ಬಿಗ್ ಬಜಾರ್ನಲ್ಲಿ ಮೆಟೀರಿಯಲ್ ಅನ್ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ಅವರು ಲಿಫ್ಟ್ ನಲ್ಲಿದ್ದಾಗ ಮಾರ್ಗಮಧ್ಯೆ ಕೆಟ್ಟು ನಿಂತಿದೆ. ಲಿಫ್ಟ್ ದುರಸ್ತಿ ಕಾರ್ಯ ಶೀಘ್ರವೇ ನಡೆಯದ ಕಾರಣ ಶ್ರೀನಿವಾಸ್ ಅವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಎನ್ನಲಾಗಿದೆ.