ಬೆಂಗಳೂರು: ಮಳೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಮೃತದೇಹ ಪತ್ತೆ

ಭಾರಿ ಮಳೆಗೆ ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಬತ್ತು ದಿನಗಳ ಬಳಿಕ ಜ್ಞಾನಭಾರತಿ ಸಮೀಪದ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರಿ ಮಳೆಗೆ ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಬತ್ತು ದಿನಗಳ ಬಳಿಕ ಜ್ಞಾನಭಾರತಿ ಸಮೀಪದ ವೃಷಭಾವತಿ ಕಾಲುವೆಯಲ್ಲಿ ಭಾನುವಾರ ಪತ್ತೆಯಾಯಿತು
ಅ. 13ರಂದು ತಾಯಿ ನಿಂಗಮ್ಮ ಹಾಗೂ ಪುತ್ರಿ ಪುಷ್ಪಾ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ನಿರಂತರ ಹುಡುಕಾಟದ ನಂತರ ಮೂರ್ನಾಲ್ಕು ದಿನ ಬಿಟ್ಟು ಪುಷ್ಪಾ ಶವ ಸಿಕ್ಕಿತ್ತು. ಆದರೆ ಎಷ್ಟೇ ಹುಡುಕಾಟ ನಡೆಸಿದ್ದರೂ ನಿಂಗಮ್ಮ ಮೃತದೇಹ ಸಿಕ್ಕಿರಲಿಲ್ಲ. ಹುಡುಕಾಟವನ್ನು ಐದು ದಿನ ಹಿಂದೆಯೇ ನಿಲ್ಲಿಸಲಾಗಿತ್ತು. 
ಅಕ್ಟೋಬರ್ 13ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಕೊಚ್ಚಿ ಹೋಗಿದ್ದರು. ಪುಷ್ಪಾ ಶವ ಕುಂಬಳಗೋಡು ಸೇತುವೆ ಬಳಿ ಇದೇ 16ರಂದು ಪತ್ತೆಯಾಗಿತ್ತು. 
ನಿಂಗಮ್ಮ ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು (ಎನ್‌ಡಿಆರ್‌ಎಫ್‌) 41 ಕಿ.ಮೀ. ಶೋಧ ಕಾರ್ಯ ನಡೆಸಿತ್ತು. ಸಾಕಷ್ಟು ಕೊಳೆತು ಹೋಗಿರುವ ಮೃತದೇಹ ಗುರುತು ಸಿಗದ ಸ್ಥಿತಿ ತಲುಪಿದೆ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ನಿಂಗಮ್ಮ ಹಿರಿಯ ಮಗಳು ಶೋಭಾ ಆಸ್ಪತ್ರೆಗೆ ತೆರಳಿ ಶವ ತಮ್ಮ ತಾಯಿಯದ್ದೆ ಎಂದು ಗುರುತು ಪತ್ತೆ ಹಚ್ಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com