2018ರ ವಿಧಾನಸಭಾ ಚುನಾವಣೆ ಹಿನ್ನಲೆ; ಒಂದು ವಾರ ಮೊದಲೇ 2018ರ ಸಿಇಟಿ ಪರೀಕ್ಷೆ!

2018ರ ಏಪ್ರಿಲ್ ನಲ್ಲಿ ನಡೆಯಬೇಕಿರುವ ಸಿಇಟಿ ಪರೀಕ್ಷೆಯನ್ನು ಸಾಮಾನ್ಯ ವೇಳಾಪಟ್ಟಿಗಿಂತ ಒಂದು ವಾರ ಮೊದಲೇ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 2018ರ ಏಪ್ರಿಲ್ ನಲ್ಲಿ ನಡೆಯಬೇಕಿರುವ ಸಿಇಟಿ ಪರೀಕ್ಷೆಯನ್ನು ಸಾಮಾನ್ಯ ವೇಳಾಪಟ್ಟಿಗಿಂತ ಒಂದು ವಾರ ಮೊದಲೇ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಉದ್ದೇಶದಿಂದ ಪರೀಕ್ಷೆಗಳನ್ನು ಒಂದು ವಾರ ಮೊದಲೇ ಆಯೋಜಿಸಲು ಕೆಇಎ ನಿರ್ಧರಿಸಿದೆ.  ಈಗಾಗಲೇ ಈ ಸಂಬಂಧ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ಮತ್ತು  ಉನ್ನತ ಶಿಕ್ಷಣ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇನ್ನು ಸಭೆಯಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ನಡೆಸಲು ನಿರ್ಧರಿಸಿದೆ. ಮೇ ತಿಂಗಳ ಮೊದಲ ವಾರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ  ನಡೆಯಲಿ ಎಂದು ಹೇಳಲಾಗುತ್ತಿದೆ. ಚುನಾವಣಾ ಆಯೋಗ ಚುನಾವಣೆಯ ಅಧಿಕೃತ ದಿನಾಂಕ ನಿಗದಿ ಮಾಡಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ತನ್ನ ಅಂತಿಮ ವೇಳೆ ಪಟ್ಟಿ.ನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನು ಪರೀಕ್ಷಾ ವೇಳೆ ಪಟ್ಟಿ ಪರಿಷ್ಕರಣೆ ಕೇವಲ ವೃತ್ತಿಪರ ಪ್ರವೇಶ ಪರೀಕ್ಷೆ ಮಾತ್ರ ಸೀಮಿತವಾಗಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಇದಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ ಪಿಯುಸಿ ಪರೀಕ್ಷೆಯ ಒಟ್ಟಾರೆ  ಕಾಲಾವಧಿಯನ್ನು ಕಡಿತಗೊಳಿಸವು ಪ್ರಾಧಿಕಾರ ನಿರ್ಧರಿಸಿದೆ. ಸಾಮಾನ್ಯವಾಗಿ ಪಿಯು ಪರೀಕ್ಷೆಗಳು 25ರಿಂದ 27 ದಿನಗಳ ಕಾಲ ನಡೆಯುತ್ತಿತ್ತು. 2018ನೇ ಸಾಲಿನಲ್ಲಿ ಈ ಅವಧಿಯನ್ನು 15 ರಿಂದ 16 ದಿನಗಳಿಗೆ ಕಡಿತಗೊಳಿಸಲು  ಪ್ರಾಧಿಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com