ಕರ್ನಾಟಕ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನ ಬಂಧನ

ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಬಂಧನಕ್ಕೊಳಪಡಿಸಿರುವ ಘಟನೆ ಸಿದ್ದಾಪುರ ತಾಲೂಕಿನ ಬಿದ್ರಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕಾರವಾರ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಬಂಧನಕ್ಕೊಳಪಡಿಸಿರುವ ಘಟನೆ ಸಿದ್ದಾಪುರ ತಾಲೂಕಿನ ಬಿದ್ರಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. 
ಸತೀಶ್ ಮಹದೇವ್ ನಾಯಕ್ (26) ಬಂಧನಕ ಆರೋಪಿಯಾಗಿದ್ದಾನೆ. 13 ವರ್ಷದ ಬಾಲಕಿಯೊಬ್ಬಳು ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಕಾಮುಕ ಸತೀಶ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. 
ಬುಧವಾರ ಮಧ್ಯಾಹ್ನ ಬಾಲಕಿ ಮಾರುಕಟ್ಟೆಗೆ ತೆರಳಿದ್ದಳು. ಮಾರುಕಟ್ಟೆಯಿಂದ ದೂರದಲ್ಲಿದ್ದು, ಅರಣ್ಯ ಪ್ರದೇಶದಿಂದ ಬಾಲಕಿ ಕಾಲ್ನಡಿಗೆ ಮೂಲಕ ಮನೆಗೆ ಬರಬೇಕಿತ್ತು. ಈ ವೇಳೆ ಬಾಲಕಿ ಒಬ್ಬಂಟಿಯಾಗಿ ಹೋಗುತ್ತಿದ್ದ ವೇಳೆ ಸ್ಥಳಕ್ಕೆ ಬಂದಿರುವ ಕಾಮುಕ ಸತೀಶ್ ಡ್ರಾಪ್ ನೀಡುವುದಾಗಿ ತಿಳಿಸಿದ್ದಾನೆ. 
ಬಾಲಕಿ ತಿರಸ್ಕರಿಸಿದಾಗ ಬಲವಂತದಿಂದ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡು ಹಿಂಬದಿಯಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬಾಲಕಿ ಕೂಗಾಡಿದ್ದಾಳೆ, ಈ ವೇಳೆ ಜನರು ಸ್ಥಳಕ್ಕೆ ಬಂದಿದ್ದಾರೆ. ಇದರಿಂತ ಭಯಭೀತನಾದ ಕಾಮುಕ ಸತೀಶ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. 
ಘಟನೆ ಬಳಿಕ ಬಾಲಕಿಯ ಪೋಷಕರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಂತೆ ಕಾಮುಕನಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
2013ರಲ್ಲಿಯೂ ಸತೀಶ್ ವಿರುದ್ಧ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com