ಮೊಬೈಲಲ್ಲೇ ಸಿಗಲಿದ್ದಾರೆ ಸಿಎಂ: ಜನರಿಗೆ ಹತ್ತಿರವಾಗಲು ಆ್ಯಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಇನ್ನು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ. ರಾಜ್ಯದ ಜನತೆ ತಮ್ಮ ಜೇಬಿನಲ್ಲಿರುವ ಮೊಬೈಲ್ ಮೂಲಕವೇ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಬಹುದು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಇನ್ನು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ. ರಾಜ್ಯದ ಜನತೆ ತಮ್ಮ ಜೇಬಿನಲ್ಲಿರುವ ಮೊಬೈಲ್ ಮೂಲಕವೇ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಬಹುದು. 
ಜನರಿಗೆ ಹತ್ತಿರವಾಗಲೆಂದೇ ಮುಖ್ಯಮತ್ರಿ ಸಿದ್ದರಾಮಯ್ಯ ಅವರು 2 ಆ್ಯಪ್ ಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. 
ಆಧುನಿಕ ತಂತ್ರಜ್ಞಾನದ ಮೂಲಕ ರಾಜ್ಯದ ಜನತೆಯನ್ನು ತಲುಪುವ ಹಾಗೂ ರೈತರಿಗೆ ನೆರವಾಗುವ ಉದ್ದೇಶದ ಎರಡು ಆ್ಯಪ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. 
ಸರ್ಕಾರ ಬಿಡುಗಡೆ ಮಾಡಿರುವ ಆ್ಯಪ್ ಮೂಲಕವೇ ಜನರು ಇನ್ನು ಮುಂದೆ, ಅಹವಾಲು, ದೂರು, ಸಲಹೆ ನೀಡಬಹುದು. ಸರ್ಕಾರದ ಸಾಧನೆ, ಕಾರ್ಯಕ್ರಮ, ಅನುಷ್ಠಾನ ಸೇರಿದಂತೆ ಮುಖ್ಯಮಂತ್ರಿಗಳ ಭಾಷಣ, ಸಂದರ್ಶನ, ಪ್ರವಾಸ ಕಾರ್ಯಕ್ರಮಗಳ ಮಾಹಿತಿ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿಯೇ ಲಭ್ಯವಾಗಲಿದೆ. 
ಇದರ ಜೊತೆಗೆ ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಾರೆಂಬ ಮಾಹಿತಿ ಸೇರಿದಂತೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ವರ್ಗಾಯಿಸುವ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಕೂಡ ಇನ್ನು ಮುಂದೆ ಲಭ್ಯವಾಗಲಿದೆ. 
ಆ್ಯಪ್ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಕೃತಿ ವಿಕೋಪಗಳು ಎದುರಾದಾಗ, ನಮಗೆ ಕೃಷಿ ಹಾಗೂ ಪರಿಹಾರ ಕುರಿತಂತೆ ಮಾಹಿತಿಗಳು ಅಗತ್ಯವಾಗಿರುತ್ತದೆ. ಹೀಗಾಗಿ ಈ ಕುರಿತಂತೆ ಮಾಹಿತಿಗಳನ್ನು ನೀಡಲು 15,000 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಭೂಮಿ ಕುರಿತಂತೆ ಜಿಪಿಎಸ್ ಮೂಲಕ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಾರೆ. ಭೂಮಿಯ ಮಾಲೀಕರು ಆ್ಯಪ್ ಮೂಲಕ ತಮ್ಮ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸಬಹುದು. ಆ್ಯಪ್ ಮೂಲಕ ರೈತರು ಬೆಂಬಲ ಬೆಲೆ ಹಾಗೂ ನಿರ್ದಿಷ್ಠ ಬೆಲೆಗಳ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಬಹುದು ಹಾಗೂ ಯೋಜನೆಗಳಿಗೆ ತಮ್ಮ ಆಧಾರ್ ಸಂಖ್ಯೆಗಳನ್ನೂ ಕಳುಹಿಸಬಹುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com