ಬೆಂಗಳೂರು: ಪ್ರವಾಹ, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನವೀನ ಮಾರ್ಗಗಳನ್ನು ಕಂಡುಹಿಡಿದಿರುವ ರಾಜ್ಯ ಸರ್ಕಾರ

ನಗರದ ಸಂಚಾರ ದಟ್ಟಣೆ ಮತ್ತು ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ನಗರದ ಸಂಚಾರ ದಟ್ಟಣೆ ಮತ್ತು ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರ ಗ್ರಾಂಡ್ ಚಾಲೆಂಜಸ್-ಕರ್ನಾಟಕ ಅಭಿಯಾನದಡಿಯಲ್ಲಿ ಗ್ರಾಂಡ್ ಚಾಲೆಂಜ್ ಕಾಲ್ 5 ಅಂಡ್ ಕಾಲ್ 6ನ್ನು ಆರಂಭಿಸಿದೆ.
ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ಕುರಿತು ಸರಿಯಾದ ಸಮಯಕ್ಕೆ ಮಾಹಿತಿ, ಸೃಜನಾತ್ಮಕ ಪಾರ್ಕಿಂಗ್ ಪರಿಹಾರ ಇತ್ಯಾದಿಗಳ ಕುರಿತು ತಂತ್ರಜ್ಞಾನಗಳ ಸಂಶೋಧನೆಯನ್ನು ಗ್ರಾಂಡ್ ಚಾಲೆಂಜ್ ಕಾಲ್ 5 ಒಳಗೊಂಡಿರುತ್ತದೆ. ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನರು ಕೆಲಸಕ್ಕೆ ಹೋಗಲು ಪ್ರಯಾಣಿಸುತ್ತಿದ್ದು ಸುಮಾರು 5 ಲಕ್ಷ ವಾಹನಗಳು ಪ್ರತಿ ವರ್ಷ ಸೇರಿಕೊಳ್ಳುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುತ್ತದೆ. ನಗರದಲ್ಲಿನ ಟ್ರಾಫಿಕ್ ಸಮಸ್ಯೆ ಹೆಚ್ಚಳದಿಂದ ಪ್ರತಿವರ್ಷ ಶತಕೋಟಿ ಡಾಲರ್ ನಷ್ಟು ಹಣ ನಷ್ಟವಾಗುತ್ತದೆ ಎಂದು ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಮತ್ತು ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆಗಳಿಗೆ ಕ್ರಾಂತಿಕಾರಕ ಮತ್ತು ನವೀನ ಬದಲಾವಣೆಗಳು ಬೇಕಾಗಿದೆ. ಇದಕ್ಕೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com