ವೀರಶೈವ-ಲಿಂಗಾಯತ ಒಂದೇ: ಈಶ್ವರ ಖಂಡ್ರೆ

ವೀರಶೈವ, ಲಿಂಗಾಯತರು ಬೇರೆ ಅಲ್ಲ. ಸ್ವತಂತ್ರ ಧರ್ಮಕ್ಕೆ ಎಷ್ಟೇ ಹೋರಾಟ ಮಾಡಿದರೂ ಅದು ತಾತ್ಕಾಲಿಕ. ಯಾವುದೇ ಕಾರಣಕ್ಕೂ ಲಿಂಗಾಯತ...
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ
Updated on: 
ಬೆಂಗಳೂರು: ವೀರಶೈವ, ಲಿಂಗಾಯತರು ಬೇರೆ ಅಲ್ಲ. ಸ್ವತಂತ್ರ ಧರ್ಮಕ್ಕೆ ಎಷ್ಟೇ ಹೋರಾಟ ಮಾಡಿದರೂ ಅದು ತಾತ್ಕಾಲಿಕ. ಯಾವುದೇ ಕಾರಣಕ್ಕೂ ಲಿಂಗಾಯತ–ವೀರಶೈವ ವಿಘಟನೆ ಆಗಲು ಬಿಡುವುದಿಲ್ಲ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವೀರಶೈವ–ಲಿಂಗಾಯತ ನಾವೆಲ್ಲಾ ಒಂದೇ’ ಎಂಬ ಘೋಷ ವಾಕ್ಯದಡಿ ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಬಾಂಧವ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟಗಾರರಿಗೆ ಬಸವತತ್ವ ಎಂಬುದು ಬರಿ ಬಾಯಿ ಮಾತಾಗಿದೆ. ಇವರೆಲ್ಲಾ ನುಡಿದಂತೆ ನಡೆಯುವ ಜನರಲ್ಲ. ಸೌಲಭ್ಯದ ಹೆಸರಿನಲ್ಲಿ ಒಳ ಪಂಗಡಗಳ ದಾರಿ ತಪ್ಪಿಸುತ್ತಿದ್ದಾರೆ. ತಾವು ಹೇಳಿದ್ದೇ ನಡೆಯುತ್ತದೆ ಎಂದು ಭಾವಿಸಿದ್ದಾರೆ. ಇವರ ಬಗ್ಗೆ ಸಮಾಜದ ಯುವಕರು ಗಂಭೀರವಾಗಿ ಆಲೋಚಿಸಬೇಕು ಎಂದು ಕರೆ ನೀಡಿದರು. 
ವೀರಶೈವ ಮಹಸಭಾ 113 ವರ್ಷಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿದೆ. ಸಮಾಜ ಬೆಳೆದು ಅಭಿವೃದ್ದಿಯಾಗಿ, ಲಾಭ ಪಡೆಯಲಿ ಎಂಬುದಷ್ಟೇ ಇದರ ಉದ್ದಶವಾಗಿತ್ತು. ಅನೇಕ ಶಿಕ್ಷಣ ಸಂಸ್ಥೆಗಳು ಬಂದವು. ಬೆಂಗಳೂರಿ ಐಟಿ ಹಬ್ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. ನಾವಿಬ್ಬರು ಅಂದರೆ ವೀರಶೈವ ಮತ್ತು ಲಿಂಗಾಯತ ಒಟ್ಟಿಗೆ ಇದ್ದರೇ  ಒಳಿತಾಗಲು ಸಾಧ್ಯ, ಇದು ಸಮಾಜಕ್ಕೆ ಉತ್ತಮ ಕೊಡುಗೆ ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌.ತಿಪ್ಪಣ್ಣ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಮುಂದಿಟ್ಟುಕೊಂಡು ಹೋದರೆ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಮಾನ್ಯ ಮಾಡುವುದಿಲ್ಲ. ಸಾರಾಸಗಟಾಗಿ ಈ ಮನವಿ ತಳ್ಳಿ ಹಾಕುತ್ತಾರೆ’ ಎಂದರು.
‘ಈ ಹಿಂದೆ ನಾನು, ಭೀಮಣ್ಣ ಖಂಡ್ರೆ, ವಿಶ್ವನಾಥ ರೆಡ್ಡಿ ಮುದ್ನಾಳ ಅಂದಿನ ಗೃಹ ಮಂತ್ರಿ ಎಲ್‌.ಕೆ.ಅಡ್ವಾಣಿ ಅವರನ್ನು ಭೇಟಿಯಾಗಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಕೋರಿದ್ದೆವು. ಆಗ ಅಡ್ವಾಣಿ ಅತ್ಯಂತ ಕೋಪದಿಂದ ಅದನ್ನು ತಿರಸ್ಕರಿಸಿದ್ದರು ಎಂದು ಸ್ಮರಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com