ಈ ಮೂವರು ಅಪ್ರಾಪ್ತರು ಪ್ರತ್ಯೇಕ ಕಾರು ಚಲಾಯಿಸುತ್ತಿದ್ದರು. ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೂವರು ಸ್ನೇಹಿತರು ವಿಹಾರಕ್ಕೆಂದು ಎಲೆಕ್ಟ್ರಾನಿಕ್ ಸಿಟಿಗೆ ತೆರಳಿ ಹಿಂತಿರುಗುತ್ತಿದ್ದರು. ಕಾರುಗಳು ಸಿಲ್ಕ್ ಬೋರ್ಡ್ ಫ್ಲೈ ಓವರ್ ಗೆ ತಲುಪಿ ಕೆಳಗೆ ಇಳಿಯುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡರು. ಅರ್ಫನ್ ನ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಸ್ಥಳದಲ್ಲಿಯೇ ಮೃತಪಟ್ಟನು. ಶ್ರೀನಿವಾಸ್ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಇನ್ನೊಂದು ಕಡೆಗೆ ನೆಗೆಯಿತು. ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತು. ಅನಿರುದ್ಧನ ಕಾರು ಸಹ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.