ಎಸ್ಎಂ ಕೃಷ್ಣ ಅಳಿಯ ವಿಜಿ ಸಿದ್ಧಾರ್ಥ ಬಳಿ ದಾಖಲೆ ರಹಿತ 650 ಕೋಟಿಗೂ ಅಧಿಕ ಹಣ ಪತ್ತೆ!

ಕಳೆದ ವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಬಳಿ 650 ಕೋಟಿ ರೂಗಳಿಗೂ ಅಧಿಕ ದಾಖಲೆ ರಹಿತ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ (ಸಂಗ್ರಹ ಚಿತ್ರ)
ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ (ಸಂಗ್ರಹ ಚಿತ್ರ)
ಬೆಂಗಳೂರು: ಕಳೆದ ವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಬಳಿ 650 ಕೋಟಿ ರೂಗಳಿಗೂ ಅಧಿಕ ದಾಖಲೆ ರಹಿತ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ಅಂದರೆ ಕಳೆದ ಸೆಪ್ಟೆಂಬರ್ 21ರಂದು ವಿಜಿ ಸಿದ್ಧಾರ್ಥ ಅವರ ವಿವಿಧ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ವಿಠಲ ಮಲ್ಯ  ರಸ್ತೆಯಲ್ಲಿರುವ ಕಾಫಿ ಡೇ ಪ್ರಧಾನ ಕಚೇರಿ, ಸದಾಶಿವನಗರದಲ್ಲಿರುವ ಅವರ ಮನೆಯೂ ಸೇರಿದಂತೆ ಚೆನ್ನೈ, ಮುಂಬೈ, ಚಿಕ್ಕಮಗಳೂರು, ಹಾಸನ, ಮಂಗಳೂರು ಸೇರಿ ಕಾಫಿ ಡೇಗೆ ಸಂಬಂಧಿಸಿದ ವಿವಿಧ ವಲಯಗಳ 25ಕ್ಕೂ ಹೆಚ್ಚು  ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿತ್ತು. ಸತತ ನಾಲ್ಕು ದಿನಗಳ ಕಾಲ ಅಧಿಕಾರಿಗಳು ವಿಜಿ ಸಿದ್ಧಾರ್ಥ ಅವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.

ಪ್ರಸ್ತುತ ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿರುವಂತೆ ದಾಳಿ ವೇಳೆ ಸಿದ್ಧಾರ್ಥ ಅವರ ವಿವಿಧ ಕಚೇರಿಗಳಿಂದ ಸುಮಾರು 650 ಕೋಟಿ ಗೂ ಅಧಿಕ ದಾಖಲೆ ರಹಿತ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು  ತಿಳಿದುಬಂದಿದೆ. ಅಂತೆಯೇ ಈ ಹಣದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ದಾಳಿ ವೇಳೆ ಸಿದ್ಧಾರ್ಥ ಅವರು ಸಾಕಷ್ಟು ಕಾನೂನುಗಳನ್ನು ಮೀರಿರಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.

ಇನ್ನು ನಿನ್ನೆ ಈ ಬಗ್ಗೆ ಮಾಹಿತಿ ನೀಡಿರುವ ಆದಾಯ ತೆರಿಗೆ ಅಧಿಕಾರಿಗಳು ಸಿದ್ಧಾರ್ಥ ಅವರ ಈ ಹಿಂದಿನ ಆದಾಯ ತೆರಿಗೆ ಸಲ್ಲಿಕೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರಸ್ತುತ ದೊರೆತಿರುವ ಆಸ್ತಿ ಮೌಲ್ಯ ಮತ್ತು ಈ ಹಿಂದೆ  ಅವರು ತೆರಿಗೆ ಸಲ್ಲಿಸುವ ವೇಳೆ ಸಲ್ಲಿಕೆ ಮಾಡಿದ್ದ ಆಸ್ತಿ ಮೌಲ್ಯಕ್ಕೂ ತಾಳೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇದಕ್ಕೆ ಒಂದಷ್ಟು ದಿನಗಳ ಕಾಲ ಸಮಯ ಹಿಡಿಯುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ದಾಖಲೆಗಳ ಪರಿಶೀಲನೆ ವೇಳೆ ಸಿದ್ಧಾರ್ಥ ಅವರು ವೇ2ವೆಲ್ಟ್ ಲಿಮಿಟೆಡ್ ಮತ್ತು ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ನಲ್ಲಿ ಆಸ್ತಿ ಹೊಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಲ್ಲಿಯೂ ಕೂಡ ಅಧಿಕಾರಿಗಳು ಶೋಧ  ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com