ರ‍್ಯಾಲಿಯಿಂದ ನದಿಗಳ ಪುನರುಜ್ಜೀವನ ಸಾಧ್ಯವಿಲ್ಲ: ರಾಜೇಂದ್ರ ಸಿಂಗ್

ನದಿಗಳ ಬಗ್ಗೆ ಜ್ಞಾನವಿಲ್ಲದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾ.ರಾಜೇಂದ್ರ ಸಿಂಗ್
ಡಾ.ರಾಜೇಂದ್ರ ಸಿಂಗ್
Updated on
ಚಿತ್ರದುರ್ಗ: ನದಿಗಳ ಪುನರುಜ್ಜೀವನಕ್ಕಾಗಿ ಈಶಾ ಫೌಂಡೇಶನ್ ನ ಸದ್ಗುರು ಜಗದೀಶ್ ವಾಸುದೇವ್ ಅವರು ಪ್ರಾರಂಭಿಸಿರುವ ರ‍್ಯಾಲಿಯ ಬಗ್ಗೆ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ, ಜಲಸಂರಕ್ಷಕ ಡಾ. ರಾಜೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ನದಿಗಳ ಬಗ್ಗೆ ಜ್ಞಾನವಿಲ್ಲದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಹಣ ಇರುವವರು ಈ ರ‍್ಯಾಲಿಗೆ ಬೆಂಬಲ ಸೂಚಿಸುತ್ತಿದ್ದಾರೆ, ಆದರೆ ಇದರಿಂದ ನದಿಗಳಾ ಪುನರುಜ್ಜೀವನ ಸಾಧ್ಯವಾಗುವುದಿಲ್ಲ. ಒಂದು ವೇಳೆ ನದಿಗಳ ಪುನರುಜ್ಜೀವನದ ಬಗ್ಗೆ ಗಂಭೀರವಾಗಿ ಯೋಚಿಸುವುದಾದರೆ ರಿವರ್ ಕಾಂಗ್ರೆಸ್ ನ್ನು ಹಮ್ಮಿಕೊಳ್ಳಿ 35 ವರ್ಷಗಳ ಹಿಂದೆ ಇದೇ ರೀತಿಯ ಪ್ರಯತ್ನ 8 ನದಿಗಳ ಪುನರುಜ್ಜೀವನಕ್ಕೆ ಸಹಕಾರಿಯಾಗಿತ್ತು ಎಂದು ರಾಜೇಂದ್ರ ಸಿಂಗ್ ಸಲಹೆ ನೀಡಿದ್ದಾರೆ. 
ಇದೇ ವೇಳೆ ಸರ್ಕಾರಕ್ಕೆ ನದಿ ಗಣಿಗಾರಿಕೆ ಮಾಡಲು ಸರ್ಕಾರ ಕಡಿವಾಣ ಹಾಕಬೇಕು ಎಂದು ಡಾ.ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com