ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ವರ್ಷ ಹಣ್ಣುಗಳ ರಾಜ ಮಾವುಗೆ ಉತ್ತಮ ಬೆಲೆ ನಿರೀಕ್ಷೆ

ಅಧಿಕ ಮಳೆ , ಆಲಿಕಲ್ಲು ನಡುವೆಯೂ ಈ ಬಾರಿ ಹಣ್ಣುಗಳ ರಾಜ ಮಾವು ಇಳುವರಿ ಚೆನ್ನಾಗಿದ್ದು, ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ.

ಬೆಂಗಳೂರು :  ಅಧಿಕ ಮಳೆ , ಆಲಿಕಲ್ಲು ನಡುವೆಯೂ ಈ ಬಾರಿ ಹಣ್ಣುಗಳ ರಾಜ ಮಾವು ಇಳುವರಿ ಚೆನ್ನಾಗಿದ್ದು,  ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ.

ಈ ವರ್ಷದ ಮೊದಲಾರ್ಧದಲ್ಲಿ 8. 5 ಲಕ್ಷಟನ್ ಮಾವಿನ ಬದಲಿಗೆ 4 ಲಕ್ಷ ಟನ್ ಮಾವು ಇಳುವರಿ ನಿರೀಕ್ಷೆಯಿದ್ದು, ಹಣ್ಣುಗಳೆಲ್ಲಾ ಚೆನ್ನಾಗಿವೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಕೊಂಡುಕೊಳ್ಳುತ್ತಿದ್ದಾರೆ   ಎಂದು ತೋಟಗಾರಿಕೆ  ತಜ್ಞ ಡಾ.ಎಸ್. ವಿ. ಹಿಟ್ಟಲ್ ಮಣಿ ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಮಾವು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಜನವರಿವರೆವಿಗೂ ಹೂ ಚೆನ್ನಾಗಿ ಬಂದಿದ್ದರಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಅನೇಕ ಕಡೆ ಸುರಿದ ಮಳೆ ಹಾಗೂ ಆಲಿಕಲ್ಲಿನಿಂದಾಗಿ ಹಣ್ಣುವಿಗೆ ತೊಂದರೆಯಾಗಿದೆ ಎಂದರು.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ. ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿದೆ . ಆದರೂ ಉತ್ತಮ ಇಳುವರಿಯ ಮಾವು ಬಂದಿರುವುದಾಗಿ  ಅವರು  ತಿಳಿಸಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರಾವಾಡ, ಹಾವೇರಿ ಮತ್ತು ರಾಮನಗರ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ರಾಜ್ಯದಲ್ಲಿ  7.5 ಲಕ್ಷ ಟನ್ ಗೂ ಹೆಚ್ಚು ಮಾವು ಬೆಳೆಯಲಾಗುತ್ತದೆ. ಈ ಪೈಕಿ 10, 000 ಟನ್ ನಷ್ಟು ಮಾವುವನ್ನು ಕಳೆದ ವರ್ಷ ರಪ್ತು ಮಾಡಲಾಗಿತ್ತು. ಈ ಬಾರಿ 25 , 000 ಟನ್ ಮಾವುವನ್ನು  ಯುಎಸ್ ಎ, ಸಿಂಗಾಪುರ, ಇಂಗ್ಲೆಂಡ್, ಮತ್ತಿತರ ರಾಷ್ಟ್ರಗಳಿಗೆ ರಪ್ತು ಆಗುವ ಸಾಧ್ಯತೆ ಇದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯ ಮಾವು ಮಂಡಳಿ ಮಾವು ಮೇಳವನ್ನು ಸ್ಥಗಿತಗೊಳಿಸಿರುವುದು ಮಾವು ಬೆಳೆಗಾರರಿಗೆ ಮತ್ತೊಂದು ತೊಂದರೆ ಆಗಿದೆ. ಕಳೆದ ಬಾರಿ ಮೇ 5 ರಿಂದ ಆಯೋಜಿಸಿದ್ದ ಮಾವು ಮೇಳದಲ್ಲಿ 125 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಈ ಬಾರಿ ಚುನಾವಣಾ ಸಂಹಿತೆ ಹಿನ್ನೆಲೆಯಲ್ಲಿ ಮಳಿಗೆ ಸ್ಥಾಪಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ನಾಗರಾಜ್ ಹೇಳುತ್ತಾರೆ.

 ಪ್ರತಿವರ್ಷ ಲಾಲ್ ಬಾಗ್ ನಲ್ಲಿ ಮೇ ಮೊದಲ ವಾರದಲ್ಲಿ ಮಾವು ಮೇಳ ಆಯೋಜಿಸಲಾಗುತ್ತದೆ. ಕೋಲಾರ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮಾವು ತರಲಾಗುತ್ತದೆ. ಇಲ್ಲಿ ಪ್ರತಿವರ್ಷ 8 ಕೋಟಿ ರೂ ಮೊತ್ತದ 7 ಟನ್ ಮಾವು ಮಾರಾಟ ನಡೆಯುತ್ತದೆ. ಮೈಸೂರು ಮತ್ತು ರಾಜ್ಯಗಳಲ್ಲಿ ರೈತರು ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.




Related Stories

No stories found.

Advertisement

X
Kannada Prabha
www.kannadaprabha.com