
ಬೆಂಗಳೂರು : ಕಳೆದ ವರ್ಷ ಸಂಭವಿಸಿದ್ದ ವಿದ್ಯುತ್ ಅವಘಡವೊಂದರಲ್ಲಿ ತನ್ನೆರಡು ಕೈಗಳನ್ನು ಕಳೆದುಕೊಂಡ 16 ವರ್ಷದ ಬಾಲಕನಿಗೆ 90 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಸ್ಕಾಂಗೆ ಆದೇಶ ನೀಡಿದೆ.
ಆದರೆ, ಈ ಪರಿಹಾರ ಹೋರಾಟ ಮಾಡುತ್ತಿರುವ ತಾಯಿಯಲ್ಲಿ ಭರವಸೆಯನ್ನು ಮೂಡಿಸಿಲ್ಲ. ಮತ್ತೊಮ್ಮೆ ಇಂತಹ ಘಟನೆ ಸಂಭವಿಸಬಹುದೆಂಬ ಭಯ ಆಕೆಯನ್ನು ಕಾಡುತ್ತಿದೆ.
ಜೂ. 21 , 2017ರಲ್ಲಿ ಲಿಂಗರಾಜಪುರಂನಲ್ಲಿ ಬೆಸ್ಕಾಂ ನಿರ್ಲಕ್ಷ್ಯದಿಂದ ವೈರ್ ಗಳು ಜೋತು ಬಿದ್ದಿದ್ದರಿಂದ ಕೆವಿನ್ ವಿಲಿಯಮ್ಸ್, ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದ. ಅಲ್ದೇ , ಸುಟ್ಟ ಗಾಯಗಳಿಂದ ನೋವು ಅನುಭವಿಸಿದ್ದ. ದೇಹದ ಎಡಭಾಗ ತೋಳಿನಿಂದ ತೊಡೆಭಾಗದವರೆಗೂ ಸುಟ್ಟು ಹೋಗಿತ್ತು.ಆತನಿಗೆ ಸೊಂಟ ಮತ್ತು ಕೈಯ ಮೊಳೆ ರಕ್ಷಣಾ ಸರ್ಜರಿಗಾಗಿ 2 ಲಕ್ಷ ರೂ ಅಗತ್ಯವಿದೆ.
ಕೆವಿನ್ ದ್ವಿತೀಯ ಪಿಯುಸಿಯಲ್ಲಿ ವ್ಸಾಸಂಗ ಮಾಡುತ್ತಿದ್ದುಇನ್ನೊಂದು ವಾರದಲ್ಲಿ ತರಗತಿಗಳು ಆರಂಭವಾಗುತ್ತಿವೆ. ಆದರೆ ಈಗ ಪರಿಹಾರದ ಸುದ್ದಿ ಕೆವಿನ್ ತಾಯಿ ವಿದ್ಯಾ ಅವರಿಗೆ ಖುಷಿ ನೀಡಿಲ್ಲ. ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಆತ ನರಳುತ್ತಿದ್ದರೆ ಯಾವೊಬ್ಬ ಅಧಿಕಾರಿಯೂ ನೋಡಲಿಲ್ಲ. ಹೇಗೆ ಸುಲಭವಾಗಿ ಪರಿಹಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪಿ. ಚೋಳನ್, ಹಣ ನೀಡಲು ನಾವು ಒಪ್ಪಿಗೆ ನೀಡಿಲ್ಲ. ಇದು ವಿಚಾರಣೆಯಷ್ಟೇ ಆಗಿದೆ. ತಮ್ಮ ವಕೀಲರೊಂದಿಗೆ ಸಮಾಲೋಚಿಸಿ ಸರ್ಕಾರದ ನಿಯಮಗಳು ಏನಿದೆ ಎಂಬುದನ್ನು ನೋಡಲಾಗುತ್ತದೆ. ಆದೇಶ ಏನಿದೆ ಎಂಬುದನ್ನು ಇನ್ನೂ ನೋಡಿಲ್ಲ ಎಂದರು.
ಆಗಷ್ಟೇ ಪಿಯುಸಿಗೆ ಸೇರಿದ ಕೆವಿನ್ ವಿದ್ಯುದಾಘಾತದಿಂದ ಎರಡೂ ಕೈ ಕಳೆದುಕೊಂಡಿದ್ದಾನೆ. ದೇಹದ ಎಡಭಾಗ ಸುಟ್ಟು ಹೋಗಿದ್ದು, ತೊಡೆಭಾಗ ಬಹುತೇಕ ಹಾನಿಯಾಗಿದೆ. ದೇಹದ ಶೇ. 62 ರಷ್ಟು ಭಾಗ ಸುಟ್ಟು ಹೋಗಿದ್ದರೂ ಬೆಸ್ಕಾಂ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಬಾಲಕನ ತಾಯಿ ವಿದ್ಯಾ ಆರೋಪಿಸುತ್ತಾರೆ.
ಈಗಾಗಲೇ ಚಿಕಿತ್ಸೆಗಾಗಿ ನಾರ್ತ್ ಬೆಂಗಳೂರು ಆಸ್ಪತ್ರೆಗೆ 21 ಲಕ್ಷ ರೂ. ಪಾವತಿಸಲಾಗಿದೆ. ಇನ್ನೂ 1 ಲಕ್ಷ ರೂ ಪಾವತಿಸಬೇಕಾಗಿದೆ. ಕೆವಿನ್ ಚಿತ್ರವನ್ನು ಬಳಸಿಕೊಂಡ ಕೆಲವರು ಹಣ ಸಂಗ್ರಹಿಸಿದ್ದಾರೆ. ಆದರೆ, ಯಾರೂ ಬಿಡಿಗಾಸು ಕೂಡಾ ನೀಡಿಲ್ಲ.
ಹಣ ಪಾವತಿಗೆ ವಿಳಂಬವಾದ ಕಾರಣ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ . ಬಿಬಿಎಂಪಿ ಆಗಲ್ಲೀ ಅಥವಾ ಪಾಲಿಕೆ ಸದಸ್ಯರಾಗಲೀ ಯಾರೊಬ್ಬರು ಸಹಾಯ ಮಾಡಿಲ್ಲ ಎಂದು ಆಕೆ ನೋವು ತೋಡಿಕೊಳ್ಳುತ್ತಾರೆ.
Advertisement