2017-18 ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 17.6ರಷ್ಟು ವೃದ್ಧಿ

ಮಾರ್ಚ್ ತಿಂಗಳ ಅಂತ್ಯಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 26. 91 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು : ಮಾರ್ಚ್ ತಿಂಗಳ ಅಂತ್ಯಕ್ಕೆ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 26. 91 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ವಿಮಾನ ನಿಲ್ದಾಣದಿಂದ ಸಾಗಿದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 17. 6 ರಷ್ಟು ವೃದ್ಧಿಯಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಿಳಿಸಿದೆ.

ಆರ್ಥಿಕ ವರ್ಷದ ವಾರ್ಷಿಕ ಅಂಕಿಅಂಶಗಳನ್ನು ಘೋಷಿಸಿದ ಬಿಐಎಎಲ್, 12 ತಿಂಗಳ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ. 2018 ಫೆಬ್ರವರಿ 19 ರ ವೇಳೆಗೆ ದಾಖಲೆಯ 91, 339 ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಬೇರೆಡೆಗೆ ಪ್ರಯಾಣಿಸಿದ್ದಾರೆ.

ಮಾ.17 2018 ರ ವೇಳೆಗೆ  ದಿನವೊಂದಕ್ಕೆ 664 ಎಟಿಎಂಗಳನ್ನು ಬಳಸಲಾಗಿದೆ. 150 ಮಿಲಿಯನ್ ಪ್ರಯಾಣಿಕರು ವಿಮಾನ ನಿಲ್ದಾಣ ಮೂಲಕ ಸಾಗಿದ್ದಾರೆ. ಈ ವರ್ಷದಲ್ಲಿ ಮಾರ್ಚ್ ದಟ್ಟಣೆಯ ವರ್ಷವಾಗಿದ್ದು, 2, 549, 523 ಪ್ರಯಾಣಿಕರನ್ನು ವಿಮಾನ ನಿಲ್ದಾಣ ನಿರ್ವಹಣೆ ಮಾಡಿದೆ . ದೇಶಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 19.8 ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ. 6 ರಷ್ಟು ವೃದ್ದಿಯಾಗಿರುವುದಾಗಿ ಬಿಐಎಎಲ್ ಹೇಳಿದೆ.


2018-19 ರ ಆರ್ಥಿಕ ವರ್ಷದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ವೃದ್ದಿಯಾಗುವ ಸಾಧ್ಯತೆ ಇದೆ ಎಂದು ಬಿಐಎಲ್  ಸಿಇಒ ಹರಿ ಮಾರರ್ ತಿಳಿಸಿದ್ದಾರೆ.

ಎರಡನೇ ರನ್ ವೇ ಈ ವರ್ಷದ ಮಧ್ಯಭಾಗದಿಂದ ಆರಂಭಗೊಳ್ಳಲಿದ್ದು, 2019ರಿಂದ ರನ್ ವೇ ಕಾರ್ಯಾರಂಭ ಮಾಡಲಿದೆ. 2021 ರೊಳಗೆ ಎರಡನೇ ಟರ್ಮಿನಲ್  ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಎರಡು ಹಂತದ ಟರ್ಮಿನಲ್   ಕೆಲಸ ಪೂರ್ಣಗೊಂಡರೆ 65 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಕಾಯ್ದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com