ವಿಶೇಷ ಸ್ಥಾನಮಾನ ಆಗ್ರಹಿಸಿ ಆಂಧ್ರ ಬಂದ್: ಗಡಿ ಭಾಗದವರೆಗೆ ಮಾತ್ರ ಕೆಎಸ್ಆರ್'ಟಿಸ್ ಬಸ್ ಸಂಚಾರ

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಂಧ್ರಪ್ರದೇಶ ಸೋಮವಾರ ಬಂದ್ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೆಎಸ್ಆರ್'ಟಿಸಿ ಬಸ್ ಗಳು ಆಂಧ್ರಪ್ರದೇಶದ ಗಡಿ ಭಾಗದ ವರೆಗೆ ಮಾತ್ರ ಸಂಚಾರ ನಡೆಸಲಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಮರಾವತಿ: ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಂಧ್ರಪ್ರದೇಶ ಸೋಮವಾರ ಬಂದ್ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೆಎಸ್ಆರ್'ಟಿಸಿ ಬಸ್ ಗಳು ಆಂಧ್ರಪ್ರದೇಶದ ಗಡಿ ಭಾಗದ ವರೆಗೆ ಮಾತ್ರ ಸಂಚಾರ ನಡೆಸಲಿವೆ ಎಂದು ತಿಳಿದುಬಂದಿದೆ. 
ಆಂಧ್ರಪ್ರದೇಶದ ಪ್ರತ್ಯೇಕ ಹೂಡಾ ಸಾಧನಾ ಸಮಿತಿಯು ಬಂದ್ ಗೆ ಕರೆ ನೀಡಿದ್ದು, ವಿರೋಧ ಪಕ್ಷಗಳಾದ ವೈಎಸ್ಆರ್ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಬಂದ್ ಗೆ ಬೆಂಬಲ ನೀಡಿವೆ. 
ಬಂದ್ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ಸಾರಿಗೆ ಸಂಸ್ಥೆ ಬಸ್ ಗಳು ಬಹುತೇಕ ಸ್ಥಗಿತಗೊಂಡಿವೆ, ಇನ್ನು ರಾಜ್ಯದಿಂದ ತೆರಳುವ ಬಸ್ ಗಳು ಆಂಧ್ರಪ್ರದೇಶದ ಗಡಿ ಭಾಗದವರೆಗೆ ಮಾತ್ರ ಸಂಚಾರ ನಡೆಸಲಿವೆ. 
ಆಂಧ್ರಪ್ರದೇಶದಲ್ಲಿ ನಡೆಸಲಾಗುತ್ತಿರುವ ಬಂದ್ ಗೆ ಬಹುತೇಕ ಕಡೆ ಬೆಂಬಲಗಳು ವ್ಯಕ್ತವಾಗತೊಡಗಿದ್ದು, ತಿರುಪತಿಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿಗಳು ತಿಳಿಸಿವೆ. ವ್ಯಾಪಾರ ವಹಿವಾಟುಗಳು ಕೂಡ ಸ್ಥಗಿತಗೊಂಡಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com