ಬೆಂಗಳೂರು : ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಬಾರದಿದ್ದರೂ ಪ್ರವೇಶ ಆರಂಭ!

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಇನ್ನೂ ಬಾರದಿದ್ದರೂ ರಾಜ್ಯದ ಅನೇಕ ಕಾಲೇಜುಗಳಲ್ಲಿ ಈಗಾಗಲೇ ಮೊದಲ ವರ್ಷದ ಪಿಯುಸಿ ಮತ್ತು ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆನ್ನು ಆರಂಭಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಇನ್ನೂ ಬಾರದಿದ್ದರೂ ರಾಜ್ಯದ ಅನೇಕ ಕಾಲೇಜುಗಳಲ್ಲಿ ಈಗಾಗಲೇ ಮೊದಲ ವರ್ಷದ ಪಿಯುಸಿ ಮತ್ತು ಪದವಿ  ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆನ್ನು ಆರಂಭಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿರುವ ಮಾಹಿತಿ ಪ್ರಕಾರ, ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಶೇ. 90 ರಷ್ಟು ಅಂಕ ಪಡೆದಿರುವ  ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ತಮ್ಮ ಮಗ ಐಸಿಎಸ್ ಇ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ್ದು, ಈಗಷ್ಟೇ ಪರೀಕ್ಷೆ ಮುಗಿದಿದ್ದು, ಫಲಿಕಾಂಶಕ್ಕಾಗಿ ಕಾಯಲಾಗುತ್ತಿದೆ. ಆದರೆ, ಕಾಲೇಜಿಗೆ ಹೋಗಿ ಕೋರ್ಸ್ ಮತ್ತು ಶುಲ್ಕದ ಬಗ್ಗೆ ವಿಚಾರಿಸಿದರೆ, ಮುಂಗಡವಾಗಿ  ಶೇ.75 ರಷ್ಟು ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದು, ಸೀಟ್   ನೀಡುವುದಾಗಿ ಹೇಳಿದ್ದಾರೆ ಎಂದು ಕೂರ್ಗ್ ಮೂಲದ ಪೋಷಕರೊಬ್ಬರು ಹೇಳುತ್ತಾರೆ.

ಪಿಯುಸಿ ಮಾತ್ರವಲ್ಲ,  ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕೆಲ ಕಾಲೇಜುಗಳು ಪದವಿ ಕೋರ್ಸಿಗೂ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿವೆ. ಆಸಕ್ತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಒಳ್ಳೆಯ ಅಂಕ ಬಂದರೆ, ಸೀಟ್  ಪಕ್ಕಾ ಆಗುತ್ತದೆ. ಫಲಿತಾಂಶ ಹೊರಬಂದ ನಂತರ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಾಲೇಜುಗಳ ಮುಖ್ಯಸ್ಥರು ಹೇಳಿದ್ದಾರೆ.

ಕೆಲ ಬೇಡಿಕೆ ಇರುವ ಕೋರ್ಸ್ ಗಾಗಿ ಸೀಟ್ ಕಾಯ್ಜಿರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಸೀಟ್ ಗಾಗಿ ವಿದ್ಯಾರ್ಥಿಗಳು 25 ಸಾವಿರ ನೀಡಬೇಕಾಗುತ್ತದೆ. ಫಲಿತಾಂಶ ಹೊರಬಂದ ನಂತರ ಪ್ರವೇಶ ನೀಡಲಾಗುತ್ತದೆ ಎಂದು  ಬೆಂಗಳೂರು ಉತ್ತರ ವಿವಿಯ ಖಾಸಗಿ ಕಾಲೇಜ್ ವೊಂದರ ಪ್ರತಿನಿಧಿ ಹೇಳುತ್ತಾರೆ.

 ಈ ಮಧ್ಯೆ ಕೆಲ ಕಾಲೇಜುಗಳ ಅಕ್ರಮಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಕಾಲೇಜ್ ಶಿಕ್ಷಣ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಅಸಹಾಯಕವಾಗಿ ಕುಳಿತಿದೆ. 

ಪೋಷಕರು ದೂರು ನೀಡಿದ್ದರೆ ಕ್ರಮ ಕೈಗೊಳ್ಳಬಹುದು,  ಪ್ರವೇಶದ ಬಗ್ಗೆ ಕಾಲೇಜ್ ಗಳು ಯಾವುದೇ ರಸೀದಿ ನೀಡುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.ಏಪ್ರಿಲ್ 30 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮೇ 7 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಇಂತಹ  ಕೆಲ ಕಾಲೇಜುಗಳ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗಿತ್ತು. ಆ ಬಾರಿಯು ಅಂತಹ ಅಕ್ರಮಗಳ ಬಗ್ಗೆ ದೂರು ನೀಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಹೇಳಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com