ಕರ್ನಾಟಕದಲ್ಲಿ ರೈತರಿಗೆ ಸಿಗುವ ಸವಲತ್ತುಗಳು ಬಗ್ಗೆ ಮಹಾರಾಷ್ಟ್ರ ರೈತರಿಗೆ ಒಲವು

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಾದಿಂಗ್ಲಾಜು ತಾಲ್ಲೂಕಿನ ನಿಲ್ಜಿಯ ರೈತರು ಕರ್ನಾಟಕ ...
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಾದಿಂಗ್ಲಾಜ್ ತಾಲ್ಲೂಕಿನ ನಿಲ್ಜಿ ಗ್ರಾಮ ಕರ್ನಾಟಕ ಗಡಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಾದಿಂಗ್ಲಾಜ್ ತಾಲ್ಲೂಕಿನ ನಿಲ್ಜಿ ಗ್ರಾಮ ಕರ್ನಾಟಕ ಗಡಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿದೆ.

ನಿಲ್ಜು (ಕೊಲ್ಹಾಪುರ): ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಾದಿಂಗ್ಲಾಜು ತಾಲ್ಲೂಕಿನ ನಿಲ್ಜಿಯ ರೈತರು ಕರ್ನಾಟಕ ಗಡಿಭಾಗದಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಿದ್ದು, ಪಕ್ಕದ ಗ್ರಾಮಗಳ ರೈತರ ಹೊಲಗಳಲ್ಲಿ ಸಮೃದ್ಧತೆ ಬೆಳೆಯುವುದು ನೋಡಿ ತಾವು ಕೂಡ ಹಾಗೆಯೇ ಜೀವನ ಸಾಗಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ.

ಇಲ್ಲಿನ ಗ್ರಾಮಸ್ಥರಿಗೆ ಕರ್ನಾಟಕದ ಗ್ರಾಮಸ್ಥರ ಜೊತೆ ಉತ್ತಮ ಬಾಂಧವ್ಯವಿದೆ. ತಮ್ಮ ರಾಜ್ಯದ ನಾಯಕರು ಕೂಡ ಇಂತಹದ್ದೇ ಸೌಕರ್ಯವನ್ನು ಮಾಡಿಕೊಟ್ಟು ತಾವು ಉತ್ತಮ ಬೆಳೆ ಬೆಳೆಯಬೇಕೆಂದು ತುಡಿಯುತ್ತಾರೆ. ಮಹಾರಾಷ್ಟ್ರ ಸರ್ಕಾರ ತಮಗೆ ಸೌಕರ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತಾರೆ.

ಪಕ್ಕದ ಕರ್ನಾಟಕದ ರೈತರು ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಕೃಷಿ ಸಾಲ ಮತ್ತು ಉಚಿತ ವಿದ್ಯುತ್ ಪೂರೈಕೆ, ಪಂಪ್ ಸೆಟ್ ಇತ್ಯಾದಿ ಸೌಕರ್ಯಗಳನ್ನು ರೈತರಿಂದ ಪಡೆಯುತ್ತಿರುವುದು ನೋಡಿ ತಮಗೆ ಮಹಾರಾಷ್ಟ್ರ ಸರ್ಕಾರ ಮೋಸ ಮಾಡುತ್ತಿದೆ ಎಂದು ಅನಿಸುತ್ತದೆ ಎನ್ನುತ್ತಾರೆ ರೆಗೌಡ್ ಪಾಟೀಲ್ ಎಂಬ ನಿವಾಸಿ. ಪಕ್ಕದ ಕರ್ನಾಟಕದ ಹಳ್ಳಿಗೆ ಹೋಗಿ ನೆಲೆಸಬೇಕೆಂದಿನಿಸುತ್ತದೆ. ಸಣ್ಣ ಪಂಪ್ ಸೆಟ್ ಗೆ ಸಹ ನಾವಿಲ್ಲಿ ನೂರಾರು ರೂಪಾಯಿ ನೀಡಬೇಕು ಎನ್ನುತ್ತಾರೆ ಅವರು.

ಇಲ್ಲಿ ಕನ್ನಡ ಮಾತನಾಡುವ ರೈತರು ಕಬ್ಬು, ಮೆಕ್ಕೆಜೋಳಗಳನ್ನು ಬೆಳೆಯುತ್ತಿದ್ದು ಹಿರಣ್ಯಕೇಶಿ ನದಿಯಿಂದ ನೀರನ್ನು ಹೊಲಗಳಿಗೆ ಹಾಯಿಸುತ್ತಾರೆ.

ಪ್ರತಿ ತಿಂಗಳು ಬಸ್ ಪಾಸ್ ಗಾಗಿ ತಾವು ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದ್ದು, ಕರ್ನಾಟಕದ ಮಕ್ಕಳು ವರ್ಷದ ಅವಧಿಗೆ ಬಸ್ ಪಾಸ್ ಗಳನ್ನು ಪಡೆಯುತ್ತಾರೆ. ನಮ್ಮ ಮಕ್ಕಳು ಹರಸಾಹಸ ಪಡಬೇಕು ಎನ್ನುತ್ತಾರೆ ಮತ್ತೊಬ್ಬ ನಿವಾಸಿ ಲಗ್ಮನೆ.

ಮತ್ತೊಮ್ಮ ಕೃಷಿ ಕಾರ್ಮಿಕ ಸತೀಶ್ ಕಲಪ್ ಗೌಲ್ ಮಾತನಾಡಿ, ಸರ್ಕಾರ ಪ್ರತಿಯೊಬ್ಬರಿಗೂ ಕರ್ನಾಟಕದಂತೆ ಧಾನ್ಯಗಳನ್ನು ನೀಡಬೇಕು. ಮಹಾರಾಷ್ಟ್ರದಲ್ಲಿ ಧಾನ್ಯಗಳು ಸೀಮಿತವಾಗಿದೆ. ಸೇವೆಯಲ್ಲಿರುವ ಕುಟುಂಬದವರು, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ರೇಷನ್ ಕಾರ್ಡು ಸಿಗುವುದಿಲ್ಲ. ಕರ್ನಾಟಕದ ಗ್ರಾಮಸ್ಥರು 20 ಲೀಟರ್ ನೀರಿಗೆ 5 ರೂಪಾಯಿಗಳಂತೆ ನೀಡುತ್ತಾರೆ. ಆದರೆ ಅಲ್ಲಿ ಅಂತಹ ವ್ಯವಸ್ಥೆಗಳಿರುವುದಿಲ್ಲ ಎನ್ನುತ್ತಾರೆ.

ಪಕ್ಕದ ಪಟ್ಟಣ ಸಂಕೇಶ್ವರದ ನಿಲ್ಗಿ ಗ್ರಾಮದಲ್ಲಿ ಸುಮಾರು 350ರಿಂದ 400 ಮನೆಗಳಿದ್ದು ಅದು 6 ಕಿಲೋ ಮೀಟರ್ ದೂರದಲ್ಲಿದೆ. ನಿಲ್ಗಿ ಗ್ರಾಮದ ತಾಲ್ಲೂಕು ಕೇಂದ್ರ ಗದಿಂಗ್ಲಾಜ್ ಆಗಿದ್ದು 10 ಕಿಲೋ ಮೀಟರ್ ದೂರದಲ್ಲಿದೆ. ಇವರು ತಮ್ಮ ಸರ್ಕಾರ ನೀಡುವ ಸೌಕರ್ಯಗಳಿಗೂ ಕರ್ನಾಟಕ ಸರ್ಕಾರ ನೀಡುವ ಸೌಕರ್ಯಗಳಿಗೂ ಹೋಲಿಕೆ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com