ಬೆಂಗಳೂರು : ಪ್ರವಾಹ ಬಂದರೆ ಕೊಚ್ಚಿಕೊಂಡು ಹೋಗುವಂತಿರುವ ಒಳಚರಂಡಿಗಳು !

ಈ ಬಾರಿಯೂ ಮಳೆಗಾಲ ಬೇಗನೆ ಆರಂಭವಾಗುವ ಲಕ್ಷಣವಿದ್ದು, ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆ ದೋರುವ ಸಾಧ್ಯತೆ ಹೆಚ್ಚಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಈ ಬಾರಿಯೂ ಮಳೆಗಾಲ ಬೇಗನೆ ಆರಂಭವಾಗುವ ಲಕ್ಷಣವಿದ್ದು, ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆ ದೋರುವ ಸಾಧ್ಯತೆ ಹೆಚ್ಚಾಗಿದೆ.  ಒಳಚರಂಡಿ  ಕಾಮಗಾರಿ ಪೂರ್ಣಗೊಳಿಸದೆ  ಕಳೆದ ವರ್ಷ ಆದ ತೊಂದೆರೆಯಿಂದ ಆದ ಪಾಠವನ್ನು ನಗರ ಆಡಳಿತ ಇನ್ನೂ ಕಲಿತಂತೆ ಕಾಣುತ್ತಿಲ್ಲ.

ಮಾ. ತಿಂಗಳೊಳಗೆ ರಾಜಕಾಲುವೆ ಕಾಮಗಾರಿ ಪೂರ್ಣಗೊಳ್ಳಬೇಕು ಅಂದುಕೊಂಡಿದ್ದರೂ ಅದು ಸಾಧ್ಯವಾಗಿಲ್ಲ. ಶೇ.50 ರಷ್ಟು ಪೂರ್ಣಗೊಂಡಿಲ್ಲ. ಶೇ. 41.8 ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಸಂಬಂಧಿತ ಇಲಾಖೆ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ.

ಕಳೆದ ವರ್ಷ ಹೆಚ್ಚಿನ ಮಳೆಯಾದ್ದರಿಂದ ಅನೇಕ ಕಡೆ ನೀರು ನುಗ್ಗಿ ಭಾರಿ ತೊಂದರೆಯಾಗಿತ್ತು. ನಂತರ ಸರ್ಕಾರ 408 ರಾಜಕಾಲುವೆ ಕಾಮಗಾರಿಗಾಗಿ 1,100 ಕೋಟಿ ರೂ. ಬಿಡುಗಡೆ ಮಾಡಿತ್ತು.

ಇದರಲ್ಲಿ 102 ಕೆಲಸಗಳು ಪೂರ್ಣಗೊಂಡಿವೆ. 279 ಕೆಲಸಗಳು ಪ್ರಗತಿಯಲ್ಲಿವೆ ಎಂದು ಬಿಬಿಎಂಪಿ ಒಳಚರಂಡಿ ಇಲಾಖೆಯ ಚೀಪ್ ಎಂಜಿನಿಯರ್ ತಂತ್ರಜ್ಞಾನ ಸಲಹೆಗಾರ ಶಿವಪ್ರಸಾದ್ ಹೇಳುತ್ತಾರೆ.

ಮೇ ತಿಂಗಳೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ. ಚುನಾವಣೆ ಹಿನ್ನೆಲೆಯಲ್ಲಿ ಮಳೆಗಾಲ ಆರಂಭದ ನಂತರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿರುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರಿನ ರಾಜಕಾಲುವೆ ನಿರ್ಮಾಣ ಕಾಮಗಾರಿಗಾಗಿ ಆದ್ಯತೆ ನೀಡುವುದಾಗಿ ಕಳೆದ ವರ್ಷ ರಾಜ್ಯಸರ್ಕಾರ ಅಶ್ವಾಸ ನೀಡಿತ್ತು. ಆದರೆ, ರಾಜಕಾಲುವೆ ತೆರವುಗೊಳಿಸುವ ರೊಬೊಟಿಕ್ ಯಂತ್ರ ಖರೀದಿಗೆ ಇನ್ನೂ ಅನುಮೋದನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ಹರಿವಿಗಾಗಿ ಬಿಡಬ್ಲ್ಯೂಎಸ್ ಎಸ್ ಬಿ  ಚರಂಡಿಗೆ ಅಳವಡಿಸಿರುವ ಪೈಪ್ ಗಳು ಮತ್ತೊಂದು ಸಮಸ್ಯೆಯಾಗಿದೆ.ಇದರಿಂದ ಹೆಚ್ಚಿನ ನೀರು  ಹಾಗೂ ಘನ ತ್ಯಾಜ್ಯ ಠೇವಣಿಯಾಗಿಡಬೇಕಾಗುತ್ತದೆ.

ಕಳೆದ ಮೂರು ನಾಲ್ಕು ದಶಕಗಳಲ್ಲಿ ಚರಂಡಿ ಮೂಲಕ ತ್ಯಾಜ್ಯ ನೀರು ಹರಿದು ಹೋಗುವಂತೆ ಮಾಡಲು ಕ್ಷಿಪ್ರ ರೀತಿಯ ಅಭಿವೃದ್ದಿ ಕಾಮಗಾರಿ ಕೈಗೊಂಡಿರುವುದಾಗಿ ಬಿಡಬ್ಲ್ಯೂಎಸ್ ಎಸ್ ಬಿ  ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದ್ದಾರೆ.

500 ಎಂಎಲ್ ಡಿ ಲೀಟರ್  ಬಳಕೆಗೆ ಯೋಗ್ಯವಲ್ಲದ ನೀರು ಒಳ ಚರಂಡಿ ಮೂಲಕ ಕೆರೆ, ನದಿಗಳನ್ನು ಸೇರುತ್ತಿದೆ, ಎಲ್ಲ ಮನಗಳನ್ನೂ ತ್ಯಾಜ್ಯ ಸಂಸ್ಕರಣಾ ಘಟಕಗಳೊಂದಿಗೆ ಸಂಪರ್ಕ ಹೊಂದುವಂತೆ ಮನವೊಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ ಎಸ್ ಬಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಒಳಚರಂಡಿ ಸಂಬಂಧಿತ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿರುವುದಾಗಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.

ಬೆಂಗಳೂರಿನ ರಾಜಕಾಲುವೆಗಳ ಒಟ್ಟು ಉದ್ದ 842 ಕಿ. ಮೀ
ಎಷ್ಟು ಉದ್ದದ ಕಾಮಗಾರಿ ಪೂರ್ಣಗೊಳಿಸಲಾಗಿದೆ 352 ಕಿ.ಮೀ
 ಉಳಿದಿರುವ ಕಾಮಗಾರಿ 490  ಕಿ. ಮೀ
ತೆರವುಗೊಳಿಸಬೇಕಾದ  ರಾಜಕಾಲುವೆಗಳ ಸಂಖ್ಯೆ 1.985
 ತೆರವುಗೊಳಿಸಿರುವ ರಾಜಕಾಲುವೆಗಳ ಸಂಖ್ಯೆ 1,225







ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com