ಮತದಾನಕ್ಕಾಗಿ ಊರಿಗೆ ತೆರಳಲು ಮತದಾರ ಉತ್ಸುಕ, ಮುಂಗಡ ಬಸ್ ಟಿಕೆಟ್ ಬುಕ್ಕಿಂಗ್ ಗೆ ಡಿಮ್ಯಾಂಡ್

ಬೆಂಗಳೂರು - ಮಂಗಳೂರು ನಡುವಣ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿನ ಮುಂಗಡ ಸೀಟು ಕಾಯ್ದಿರಿಸುವಿಕೆ ಭರ್ಜರಿಯಾಗಿ ಸಾಗಿದ್ದು, ಈಗಾಗಲೇ ಶೇ.35 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದೆ.
ಮಂಗಳೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಚಿತ್ರ
ಮಂಗಳೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಚಿತ್ರ

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಬೆಂಗಳೂರು - ಮಂಗಳೂರು ನಡುವಣ  ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿನ  ಮುಂಗಡ ಸೀಟು ಕಾಯ್ದಿರಿಸುವಿಕೆ ಪ್ರಕ್ರಿಯೆ  ಭರ್ಜರಿಯಾಗಿ ಸಾಗಿದ್ದು, ಈಗಾಗಲೇ ಶೇ.35 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದೆ.

ಹವಾನಿಯಂತ್ರಣ , ಹವಾನಿಯಂತ್ರಣವಲ್ಲದ, ಸ್ಲೀಪರ್, ರಾಜಹಂಸ, ಐರಾವತ, ಸೇರಿದಂತೆ 65 ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ 2, 925 ಸೀಟುಗಳ ಪೈಕಿ 1, 023 ಸೀಟುಗಳು ಈಗಾಗಲೇ ಬುಕ್ಕಿಂಗ್ ಆಗಿವೆ.

 ಚುನಾವಣೆ ಪರಿಣಾಮ ಮಾತ್ರವಲ್ಲದೇ, ರಜೆಯೂ ಸಿಗುವುದರಿಂದ  ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿದೆ ಎಂದು ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಕ ದೀಪಕ್ ಕುಮಾರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

ಬೆಂಗಳೂರು ಮಂಗಳೂರು ನಡುವಣ ಖಾಸಗಿ ಬಸ್ಸುಗಳಲ್ಲಿ ಟಿಕೆಟ್ ಬುಕ್ಕಿಂಗ್ ಕಷ್ಟಕರವಾಗಿದೆ ಎಂದು  ಚುನಾವಣೆ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಬರುತ್ತಿರುವ ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಸೀಟರ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ಲೀಪರ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ ಎಂದು  ಅಶ್ವಿನಿ ಹೇಳುತ್ತಾರೆ.

 ಈ ನಡುವೆ ಬೆಂಗಳೂರು- ಮಂಗಳೂರು ನಡುವಣದ ಪ್ರಮುಖ ಎರಡು ರೈಲುಗಳ ಸ್ಲೀಪರ್ ದರ್ಜೆಯಲ್ಲಿನ ಸೀಟುಗಾಗಿ ಕಾಯುವವರ ಸಂಖ್ಯೆ 100 ಆಗಿದೆ. ಮೇ 11 ರವರೆಗೂ ಕಣ್ಣೂರು ಎಕ್ಸ್ ಪ್ರೆಸ್ ನಲ್ಲಿ  88  ಹಾಗೂ ಕಾರವಾರ ಎಕ್ಸ್ ಪ್ರೆಸ್ ನಲ್ಲಿ 115 ಪ್ರಯಾಣಿಕರು ಕಾಯುವ ಪಟ್ಟಿಯಲ್ಲಿದ್ದಾರೆ.

ಮೂರು ಹಾಗೂ ಎರಡನೇ  ಹಂತದ  ಹವಾನಿಯಂತ್ರಿತ ಟಿಕೆಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚಿಗೆ ಬುಕ್ಕಿಂಗ್ ಆಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com