
ಬೆಂಗಳೂರು: ಮುಂದಿನ ತಿಂಗಳ ಮಧ್ಯಭಾಗದಿಂದ ಮತ್ತೊಂದು ಆರು ಬೋಗಿಯ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.
ಆಗಸ್ಟ್ ತಿಂಗಳಲ್ಲಿಯೇ ಎರಡನೇ ಘಟಕವನ್ನು ಪೂರೈಕೆ ಮಾಡಲಾಗುವುದು, ಆದಾಗ್ಯೂ, ಎಲ್ಲಾ ಸುರಕ್ಷತಾ ಅನುಮತಿಗಳನ್ನು ಪಡೆಯಬೇಕಾಗಿರುವುದರಿಂದ ಸಾರ್ವಜನಿಕ ಬಳಕೆಗಾಗಿ 30-45 ದಿನಗಳ ಹೆಚ್ಚಿನ ದಿನವನ್ನು ಬಿಎಂಆರ್ ಸಿಎಲ್ ತೆಗೆದುಕೊಳ್ಳುತ್ತಿದೆ ಎಂದು ಬಿಇಎಂಎಲ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ ಮಧ್ಯಭಾಗದಿಂದ ಮತ್ತೊಂದು ಆರು ಬೋಗಿಗಳ ರೈಲು ಕಾರ್ಯಾಚರಣೆ ನಡೆಸಲಿದ್ದು, ಅಕ್ಟೋಬರ್ ತಿಂಗಳಲ್ಲಿ ಮೂರನೇ ಆರು ಬೋಗಿಯ ರೈಲು ಸಂಚಾರ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.
Advertisement