ಬೆಂಗಳೂರಿನಲ್ಲೇ "ಏರೋ ಇಂಡಿಯಾ" ಪ್ರದರ್ಶನ ನಡೆಸಿ: ಸೀತಾರಾಮನ್ ಗೆ ಸಿಎಂ ಪತ್ರ

ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರ್ ಶೋ "ಏರೋ ಇಂಡಿಯಾ" ವನ್ನು ಲಖನೌಗೆ ಸ್ಥಳಾಂತರಿಸಬಾರದೆಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ
ಮುಖ್ಯಮಂತ್ರಿ ಕುಮಾರಸ್ವಾಮಿ
Updated on: 
ಬೆಂಗಳೂರು: ಎರಡು ದಶಕಗಳಿಂದ ಬೆಂಗಳೂರಿನಲ್ಲಿಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರ್ ಶೋ "ಏರೋ ಇಂಡಿಯಾ" ವನ್ನು ಲಖನೌಗೆ ಸ್ಥಳಾಂತರಿಸಬಾರದೆಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕಿದೆ. 'ಎರೋ-ಇಂಡಿಯಾ 2019' ಆವೃತ್ತಿಯನ್ನು  ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮಾನ್  ಅವರಿಗೆ ಪತ್ರ ಬರೆದಿದ್ದಾರೆ.
 "ಬೆಂಗಳೂರು ರಕ್ಷಣೆ ಹಾಗು  ವಾಯುಯಾನ ಮೇಜರ್ಗಳ ಹಬ್ ಆಗಿರುವ  ಕಾರಣ ನಿಸ್ಸಂಶಯವಾಗಿ ಪ್ರದರ್ಶನವನ್ನು ನಡೆಸಲು ಅತ್ಯಂತ ಸೂಕ್ತ ಸ್ಥಳವಾಗಿದೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯವು ಆಯೋಜಿಸುವ "ಏರೋ ಇಂಡಿಯಾ" ಶೋ ಈ ಬಾರಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿದೆ ಎಂದು  ವರದಿಗಳಿವೆ ಆದರೆ ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವರು  ನಾವು ಈ ಸಂಬಂಧ ಯಾವ ಅಧಿಕೃತ ಘೋಷಣೆ ಮಾಡಿಲ್ಲ  ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ದೇಶದ ನಾನಾ ಭಾಗದ ಜನರು ಏರ್ ಶೋ ನಡೆಸಲುವುದಕ್ಕೆ ನಮ್ಮ ನಗರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಬೇಡಿಕೆ ಇತ್ಟಿದ್ದಾರೆ ಎಂದೂ ಅವರು ಹೇಳಿದ್ದರು.
1996 ರಲ್ಲಿ "ಏರೋ ಇಂಡಿಯಾ" ವೈಮಾನಿಕ ಪ್ರದರ್ಶನ ಪ್ರಾರಂಭವಾದಾಗಿನಿಂದ ಬೆಂಗಳೂರು ಏಷ್ಯಾದ ಅತಿ ದೊಡ್ಡ ಏರ್ ಶೋಗೆ ಆತಿಥ್ಯ ವಹಿಸುತ್ತಿದೆ.  ಫೆಬ್ರವರಿ 2017 ರಲ್ಲಿ ನಡೆದ 11 ನೇ ಆವೃತ್ತಿಯಲ್ಲಿ ಭಾರತೀಯ ಸಂಸ್ಥೆಗಳು ಹಾಗೂ ವಿದೇಶೇಈ ಸಂಸ್ಥೆಗಳು ಸೇರಿ 51 ದೇಶಗಳ 549 ಸಂಸ್ಥೆಗಳೂ ಪಾಲ್ಗೊಂಡಿದೆ. ಇದೀಗ ಪ್ರದರ್ಶನ ಸ್ಥಳಾಂತರ ವರದಿಯು ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದ್ದು ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಏರ್ ಶೋ ನಮ್ಮಲ್ಲೇ ನಡೆಯುವಂತೆ ರಕ್ಷಣಾ ಸಚಿವರ ಮೇಲೆ ಒತ್ತಡ ಹೇರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com