ಬೆಂಗಳೂರು: ಅತಿಥಿ ಟೆಕ್ಕಿ ಮೇಲೆ ಅತ್ಯಾಚಾರ, ಹೋಟೆಲ್ ಮ್ಯಾನೇಜರ್ ಬಂಧನ

ರಿಚ್ಮಂಡ್ ರಸ್ತೆಯ ಸ್ಟಾರ್ ಹೋಟೆಲ್ ವೊಂದರಲ್ಲಿ ಭಾನುವಾರ ರಾತ್ರಿ ಮಧ್ಯಪ್ರದೇಶದ 28 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಹೋಟೆಲ್ ಮ್ಯಾನೇಜರ್ ನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಿಚ್ಮಂಡ್ ರಸ್ತೆಯ ಸ್ಟಾರ್ ಹೋಟೆಲ್ ವೊಂದರಲ್ಲಿ   ಭಾನುವಾರ ರಾತ್ರಿ   ಮಧ್ಯಪ್ರದೇಶದ 28 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಹೋಟೆಲ್  ಮ್ಯಾನೇಜರ್ ನನ್ನು  ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಮನಿಶ್ ಕುಮಾರ್ ಸಿಂಗ್  ( 26) ಬಂಧಿತ ಆರೋಪಿ. ಈತ ಮೂಲತ: ಬಿಹಾರದವನಾಗಿದ್ದು,  ಅತ್ಯಾಚಾರ ಆರೋಪದ ಮೇಲೆ ಆತನನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದೂರು ಮೂಲಕ ಯುವತಿ ಭಾನುವಾರ ಸಂಜೆ ನಗರಕ್ಕೆ ಬಂದಿದ್ದು,  ರಾತ್ರಿ 8-30  ರ ಸುಮಾರಿನಲ್ಲಿ ಹೋಟೆಲ್ ಗೆ ಹೋಗಿದ್ದಾರೆ.  ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಹಿಂಬಾಲಿಸಿದ ಸಿಂಗ್ ಕೊಠಡಿಯಲ್ಲಿ  ಅತ್ಯಾಚಾರ ನಡೆಸಿದ್ದಾನೆ. ಇದರಿಂದಾಗಿ ಯುವತಿ ಕೆಲಕಾಲ ಕೋಮ ಸ್ಥಿತಿಗೆ ಜಾರಿದ್ದಳು. ಸೋಮವಾರ ಮುಂಜಾನೆ ನೀಡಿದ್ದ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಎರಡು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ. ಭಾನುವಾರ ಸಂಜೆ ಯುವತಿ ಒಬ್ಬಳೇ ಇರುವುದನ್ನು ಗಮನಿಸಿದ ಆತ  ಸಹಾಯ ಮಾಡುವ ನೆಪದಲ್ಲಿ  ಆಕೆಯನ್ನು ಹಿಂಬಾಲಿಸಿ ಅತ್ಯಾಚಾರ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ಮಾಡಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಲಾಗಿದ್ದು, ಸಿಸಿಟಿವಿ  ಪರಿಶೀಲನೆ ನಡೆಸಲಾಗುತ್ತಿದೆ. ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com