ನೆಲಮಂಗಲ ಬಳಿ ಭೀಕರ ಅಪಘಾತ: ಪೋಷಕರು ಕೆಳಗೆ ಬಿದ್ದರೂ ಚಲಿಸುತ್ತಿದ್ದ ಬೈಕ್ ಮೇಲೆ ಕುಳಿತಿದ್ದ ಮಗು!

ನೆಲಮಂಗಲದ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಪೋಷಕರು ಕೆಳಗೆ ಬಿದ್ದರು ಚಲಿಸುತ್ತಿದ್ದ ಬೈಕ್ ಮೇಲೆ ಮಗುವೊಂದೆ ಕುಳಿತ್ತಿದ್ದು 500 ಮೀಟರ್ ...
ಅಪಘಾತ ದೃಶ್ಯ
ಅಪಘಾತ ದೃಶ್ಯ
Updated on
ನೆಲಮಂಗಲ: ನೆಲಮಂಗಲದ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಪೋಷಕರು ಕೆಳಗೆ ಬಿದ್ದರು ಚಲಿಸುತ್ತಿದ್ದ ಬೈಕ್ ಮೇಲೆ ಮಗುವೊಂದೆ ಕುಳಿತ್ತಿದ್ದು 500 ಮೀಟರ್ ಮುಂದೆ ಸಾಗಿದ ಬೈಕ್ ರಸ್ತೆ ಬದಿ ಬಿದ್ದಿದ್ದು ಸಿನಿಮೀಯ ರೀತಿಯಲ್ಲಿ ಮಗು ಅಪಾಯದಿಂದ ಪಾರಾಗಿದೆ. 
ಹೋಂಡಾ ಆಕ್ಟೀವಾಗೆ ವೇಗವಾಗಿ ಬಂದ ಪಲ್ಸರ್ ಬೈಕ್ ವೊಂದು ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ದಂಪತಿಗಳು ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಇನ್ನು ಪಲ್ಸರ್ ಬೈಕ್ ನ ಪೆಟ್ರೋಲ್ ಮೇಲೆ ಮಗುವನ್ನು ಕುಳಿಸಲಾಗಿತ್ತು. ಇದರಿಂದಾಗಿ ಮಗು ಬೈಕ್ ನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿತು. 
ಇನ್ನು ಬೈಕ್ ರೈಸಿಂಗ್ ನಲ್ಲಿ ಇದ್ದಿದ್ದರಿಂದ ಸುಮಾರು 500 ಮೀಟರ್ ನಷ್ಟು ದೂರಕ್ಕೆ ಬೈಕ್ ಚಲಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದೆ. ಇನ್ನು ಬೈಕ್ ನಿಧಾನವಾಗಿ ಕೆಳಗೆ ಬಿದ್ದಿದ್ದರಿಂದ ಮಗುವಿಗೆ ಯಾವುದೇ ಗಾಯಗಳು ಆಗಿಲ್ಲ. 
ಅಪಘಾತದ ವೇಳೆ ಕೆಳಗೆ ಬಿದ್ದಿದ್ದ ದಂಪತಿಗಳ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ಅಪಘಾತದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com