ಒಂದು ಸಣ್ಣ ಫ್ಲೆಕ್ಸ್ ಕೂಡ ನಗರದಲ್ಲಿ ಕಾಣಬಾರದು: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ

ನಗರದಲ್ಲಿ ಒಂದು ಸಣ್ಣ ಫ್ಲೆಕ್ಸ್ ಕಾಣಿಸಿದರೂ ಅದಕ್ಕೆ ನಗರ ಪೊಲೀಸ್ ಆಯುಕ್ತರೇ ಹೊಣೆಯಾಗುತ್ತಾರೆಂದು ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿ ಒಂದು ಸಣ್ಣ ಫ್ಲೆಕ್ಸ್ ಕಾಣಿಸಿದರೂ ಅದಕ್ಕೆ ನಗರ ಪೊಲೀಸ್ ಆಯುಕ್ತರೇ ಹೊಣೆಯಾಗುತ್ತಾರೆಂದು ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಬಿಬಿಎಂಪಿಗೆ ಅಕ್ರಮ ಜಾಹೀರಾತು, ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲು ಆಗಸ್ಟ್.31ರವರೆಗೂ ಗಡುವು ನೀಡಿದೆ. 
ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡುತ್ತಿದ್ದ ಸಂದರ್ಭದಲ್ಲಿ ವಾದ ಮಂಡಿಸಿದ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿಯವರು ಪಾಲಿಕೆಗೆ ಅನಧಿಕೃತ ಜಾಹೀರಾತು ಫಲಕ ಕುರಿತಂತೆ ನೀಡಿದ್ದ 1192 ಆಕ್ಷೇಪಣೆಗಳ ಬಂದಿವೆ. ಪೂರ್ವ ವಲಯದಲ್ಲಿ 738 ಹಾಗೂ ದಕ್ಷಿಣ ವಲಯದಲ್ಲಿ 243 ಆಕ್ಷೇಪಣೆ ಬಂದಿವೆ. ಅವುಗಳನ್ನು ಪರಿಶೀಲನೆ ನಡೆಸಿ, ದಾಖಲೆಗಳನ್ನು ಅವಲೋಕಿಸಿ ಆದಷ್ಟು ಬೇಗ ಅವುಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು. 
ಈ ವೇಳೆ ಜಾಹೀರಾತು ನೀತಿ ಕುರಿತಂತೆ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕೀಲರು, ನೀತಿ ಅಂತಿಮಗೊಳಿಸುವ ಪ್ರಕ್ರಿಯೆಗಳು ನಡೆದಿವೆ. 2016ರ ನೀತಿ ಅವಧಿ ಮುಗಿದ ನಂತರ ಯಾವುದೇ ಪರವಾನಗಿ ನವೀಕರಲಿಸಿಲ್ಲ. ಹೈಕೋರ್ಟ್ ನಲ್ಲಿ ಜಾಹೀರಾತು ಫಲಕ ಕುರಿತ 112 ಪ್ರಕರಣಗಳು, ಸಿವಿಲ್ ಕೋರ್ಟ್ ನಲ್ಲಿ 90 ಪ್ರಕರಣಗಳಿವೆ. 26ರಲ್ಲಿ ತಡೆಯಾಜ್ಞೆಗಳಿವೆ. ಆಗಸ್ಟ್ 31ರೊಳಗೆ ನೀತಿ ಅಖೈರುಗೊಳಿಸಲಾಗುವುದು ಎಂದು ತಿಳಿಸಿದರು. 
ವಿ. ಶ್ರೀನಿಧಿಯವರು ಪಾಲಿಕೆಗೆ ಅನಧಿಕೃತ ಜಾಹೀರಾತು ಫಲಕ ಕುರಿತಂತೆ ನೀಡಿದ್ದ 1192 ಆಕ್ಷೇಪಣೆಗಳ ಬಂದಿವೆ. ಪೂರ್ವ ವಲಯದಲ್ಲಿ 738 ಹಾಗೂ ದಕ್ಷಿಣ ವಲಯದಲ್ಲಿ 243 ಆಕ್ಷೇಪಣೆ ಬಂದಿವೆ. ಅವುಗಳನ್ನು ಪರಿಶೀಲನೆ ನಡೆಸಿ, ದಾಖಲೆಗಳನ್ನು ಅವಲೋಕಿಸಿ ಆದಷ್ಟು ಬೇಗ ಅವುಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು. 
ಈ ವೇಳೆ ಜಾಹೀರಾತು ನೀತಿ ಕುರಿತಂತೆ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕೀಲರು, ನೀತಿ ಅಂತಿಮಗೊಳಿಸುವ ಪ್ರಕ್ರಿಯೆಗಳು ನಡೆದಿವೆ. 2016ರ ನೀತಿ ಅವಧಿ ಮುಗಿದ ನಂತರ ಯಾವುದೇ ಪರವಾನಗಿ ನವೀಕರಲಿಸಿಲ್ಲ. ಹೈಕೋರ್ಟ್ ನಲ್ಲಿ ಜಾಹೀರಾತು ಫಲಕ ಕುರಿತ 112 ಪ್ರಕರಣಗಳು, ಸಿವಿಲ್ ಕೋರ್ಟ್ ನಲ್ಲಿ 90 ಪ್ರಕರಣಗಳಿವೆ. 26ರಲ್ಲಿ ತಡೆಯಾಜ್ಞೆಗಳಿವೆ. ಶೀಘ್ರಗತಿಯಲ್ಲಿ ನೀತಿ ಅಖೈರುಗೊಳಿಸಲಾಗುವುದು ಎಂದು ತಿಳಿಸಿದರು. 

ನಗರದ ಕೆಲವೆಡೆ ಈಗಲೂ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್ ಗಳಿರುವ ಹಿನ್ನಲೆಯಲ್ಲಿ ಈ ವೇಳೆ ಈ ವೇಳೆ ಕಿಡಿಕಾರಿದ ನ್ಯಾಯಾಲಯ, ನಗರದಲ್ಲಿ ಒಂದು ಸಣ್ಣ ಫ್ಲೆಕ್ಸ್ ಕಾಣಿಸಿಕೊಂಡರೂ ಅದಕ್ಕೆ ನಗರ ಪೊಲೀಸ್ ಆಯುಕ್ತರು ಹೊಣೆಯಾಗುತ್ತಾರೆಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಆದೇಶ ನೀಡಿದ್ದರೂ ನಗರದಲ್ಲಿ ಈಗಲು ಫ್ಲೆಕ್ಸ್ ಗಳೇಕೆ ಕಾಣಿಸುತ್ತಿವೆ? ನೀವಕೆ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿಲ್ಲ ಎಂದು ಪೊಲೀಸ್ ಆಯುಕ್ತರಿಗೆ ಪ್ರಶ್ನೆ ಮಾಡಿತು. 
ಈ ವೇಳೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪರ ವಕೀಲ, ಆ ಫ್ಲೆಕ್ಸ್ ಗಳು ಬೈಲೇನ್ಸ್, ವಿದ್ಯುತ್ ಕಂಬಗಳು ಇತರೆಡೆಗಳಲ್ಲಿ ಹಾಕಿರುವ ಜಾಹೀರಾತುಗಳಾಗಿವೆ. ಅಲ್ಲಿ ಸಿಸಿಟಿವಿಗಳಾವುದೂ ಇಲ್ಲ. ಒಂದು ವೇಳೆ ಸಿಸಿಟಿವಿ ಕ್ಯಾಮೆರಾಗಳಿಲ್ಲದಿದ್ದರೆ, ಗಸ್ತು ತಿರುಗುವಪೇದೆಗಳು ಪರಿಶೀಲನೆ ನಡೆಸಬೇಕು. ಅವರು ಪರಿಶೀಲನೆ ನಡೆಸುತ್ತಿಲ್ಲವೇ? ಅಕ್ರಮ ಫ್ಲೆಕ್ಸ್'ಗಳು ಸಂಪೂರ್ಣವಾಗಿ ತೆರವುಗೊಳ್ಳುವವರೆಗೂ ನೀವು ವಿಶ್ರಾಂತಿ ಪಡೆಯುವಂತಿಲ್ಲ. ಈ ಬಗ್ಗೆ ನೀವು ಸಾಕಷ್ಟು ಗಂಭೀರವಾಗಿರಬೇಕು, ಪದೇ ಪದೇ ಫ್ಲೆಕ್ಸ್ ಹಾಕುವವರ ಮಾಹಿತಿ ಸಂಗ್ರಹಿಸಿ. ಅಂಥವರು ಮತ್ತೆ ಮತ್ತೆ ದಂಟ ಕಟ್ಟಿ ಪಾರಾಗಲು ಅವಕಾಶ ನೀಡಬಾರದು. ತಪ್ಪುಗಳನ್ನು ಪುನರಾವರ್ತಿಸುವವರ ಅಂಕಿ ಅಂಶಗಳನ್ನು ಸಂಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಿ. ಅಗತ್ಯವಿದ್ದರೆ ಅದಕ್ಕೆ ಸಾಫ್ಟ್ ವೇರ್ ಸಿದ್ದಪಡಿಸಿ ಎಂದು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com