ಬೆಂಗಳೂರು: ಮದುವೆಗಾಗಿ 13 ಲಕ್ಷ ರು. ಖರ್ಚು ಮಾಡಿದ ಮಹಿಳೆ, ಆದರೂ ಕೈಕೊಟ್ಟ ಎನ್ಆರ್‏ಐ ಪತಿ!

ಮದುವೆಗಾಗಿ ಬರೊಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿಸಿ, ನಂತರ ಆ ಮಹಿಳೆಗೆ ಎನ್ ಆರ್ ಐ ಪತಿಯೊಬ್ಬ ಕೈಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮದುವೆಗಾಗಿ ಬರೊಬ್ಬರಿ  13 ಲಕ್ಷ ರೂಪಾಯಿ ಖರ್ಚು ಮಾಡಿಸಿ, ನಂತರ ಆ ಮಹಿಳೆಗೆ ಎನ್ ಆರ್ ಐ ಪತಿಯೊಬ್ಬ ಕೈಕೊಟ್ಟಿರುವ  ಘಟನೆ ತಡವಾಗಿ  ಬೆಳಕಿಗೆ ಬಂದಿದೆ.
ಕಳೆದ 8 ವರ್ಷಗಳ ಹಿಂದೆ ತಾಯಿ ಕಳೆದುಕೊಂಡು ತನ್ನ ಸ್ವಂತ ಕುಟುಂಬದಲ್ಲಿ ವಾಸಿಸಬೇಕೆಂದುಕೊಂಡಿದ್ದ  ಸುಚಿತ್ರಾ ( ಹೆಸರು ಬದಲಾಯಿಸಲಾಗಿದೆ  ) 38, ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಳು.
ಎರಡು ವರ್ಷಗಳ ಹಿಂದೆ ಮದುವೆಗಾಗಿ  ಕೆಲ ಆನ್ ಲೈನ್ ಮೊರೆ ಹೋಗಿ ಮದುವೆಗಾಗಿ ಎಲ್ಲಾ ರೀತಿಯ  ಸಿದ್ಧತೆ ಮಾಡಿಕೊಂಡಿದ್ದಳು. ಪತಿಯ ಕುಟುಂಬದವರ ಒತ್ತಾಯದಿಂದ 12 ರಿಂದ 13 ಲಕ್ಷದವರೆಗೂ ವೆಚ್ಚ ಮಾಡಿದ್ದಲ್ಲದೇ, ಪತಿಯ ತಾಯಿ ಹಾಗೂ ಅತ್ತೆಗೆ ಸುಮಾರು 3 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಕೂಡಾ ನೀಡಿದ್ದಳು.
ಆಕೆಯ ಪತಿ ಅಮೆರಿಕಾದಲ್ಲಿದ್ದು, ಮದುವೆಗಾಗಿ ಆಗಸ್ಟ್ 2016ರಂದು ಬೆಂಗಳೂರಿಗೆ ಬಂದಿದ್ದು, ಮದುವೆಗೂ ಮುಂಚಿತವಾಗಿ ಮೂರು ವಾರಗಳ ಕಾಲ ಆಕೆಯೊಂದಿಗೆ ಸುತ್ತಾಡಿ ನಂತರ ಸೆಪ್ಟೆಂಬರ್ 2016 ರಂದು ಮತ್ತೆ ಅಮೇರಿಕಾಕ್ಕೆ ಹೋಗಿದ್ದಾನೆ. ಆತ ತೆರಳುವ ಮುನ್ನ ಹೈದ್ರಾಬಾದಿನಲ್ಲಿರುವ ತನ್ನ ತಾಯಿಯೊಂದಿಗೆ  ಸ್ವಲ್ಪ ದಿನ ಇರುವಂತೆ ಹೇಳಿದ್ದು, ಆದೇ ರೀತಿಯಲ್ಲಿ ಅಲ್ಲಿಗೆ ಹೋಗಿ 13 ದಿನ ಇದೆ. ನಂತರ ಬೆಂಗಳೂರಿನಲ್ಲಿ ಅವರ ಕುಟುಂಬ ಸಂಬಂಧಿಕರ ಮದುವೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಎಲ್ಲರ ಎದುರು  ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ನವೆಂಬರ್ 13, 2016ರಂದು ಏನಾದರೂ ಹಣ  ಅಥವಾ ಆಸ್ತಿ  ಇದ್ದರೆ ಅಮೆರಿಕಾದಲ್ಲಿನ ಜೀವನ ನಿರ್ವಹಣೆ ವೆಚ್ಚ ಭರಿಸುವ ಒಪ್ಪಂದದೊಂದಿಗೆ ತನನ್ನು  ಅಮೆರಿಕಾಕ್ಕೆ ಕರೆಯಿಸಿಕೊಳ್ಳುವ ಒಪ್ಪಂದವಾಗಿತ್ತು.
ಆದರೆ, ನವೆಂಬರ್ 15 ರಂದು  ಪತಿ ಪೋನ್ ಮೂಲಕ ಮಾತನಾಡಿ ಮದುವೆಯಿಂದ ಏನೂ ಆಗಲ್ಲ. ನೀನು ಅಮೆರಿಕಾಕ್ಕೆ ಬಾರದಂತೆ ಹಾಗೂ ಬೆಂಗಳೂರಿನಲ್ಲಿರುವ ಆಕೆಯ ನಿವಾಸವನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ತನ್ನ ಸಹೋದರರಿಂದ ಹಲ್ಲೆ ಮಾಡುವ ಬೆದರಿಕೆಯೊಡ್ಡಿದ್ದಾನೆ ಎಂಬ ಬೆದರಿಕೆ ಹಾಕಿದರು. ನಂತರ ಮನೆಯಿಲ್ಲದೆ ಕೆಲಸ ಬಿಡುವಂತಾಯಿತು. ಆತನನ್ನು ಸಂಪರ್ಕಿಸಲು ಯತ್ನಿಸಿದ್ದರೂ ಆತ ಸಿಗುತ್ತಿರಲಿಲ್ಲ. ಇ- ಮೇಲ್ ಮಾಡಿದ್ದರೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆ ಮಹಿಳೆ ತನ್ನ ಅಳಲು ತೋಡಿಕೊಂಡಿದ್ದಾರೆ.
ಜನವರಿ 2017 ರಂದು ಪತಿ ಡೈವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೇ ಮದುವೆ ವೆಚ್ಚವಾಗಿ 20 ಲಕ್ಷ ನೀಡುವಂತೆ ಕೇಳಲಾಗಿದೆ. ಇದರಿಂದಾಗಿ  ಆಕೆ ತನ್ನ ಪತಿ, ಅತ್ತೆ ಹಾಗ ನಾದಿನಿ ವಿರುದ್ಧ ದೂರು ದಾಖಲಿಸಿದ್ದಾಳೆ. ಆದಾಗ್ಯೂ ನಾದಿನಿ ವಿರುದ್ಧ ಕ್ರಮ  ಕೈಗೊಳ್ಳಲು ನ್ಯಾಯಾಲಯ ನಿರಾಕರಿಸಿದೆ.
ಪತಿ ವಿದೇಶದಿಂದ ಡೈವೋರ್ಸ್ ಅರ್ಜಿ ಹಾಕಿದ್ದು, ಆತನನ್ನು ಬಲವಂತವಾಗಿ ಭಾರತೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲು  ಕಾನೂನು ಪ್ರಕ್ರಿಯೆಗಳಿಲ್ಲ. ಇಂತವರ ಹಸ್ತಾಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನೇಕ ಬಾರಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ವಕೀಲ ಮೊಹಮ್ಮದ್ ಶಕೀಬ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com