ಮಹಿಳೆಗೆ ಅಶ್ಲೀಲ ವಿಡಿಯೋ ತೋರಿಸಿ, ಅಸಭ್ಯವಾಗಿ ವರ್ತಿಸಿದ ಓಲಾ ಚಾಲಕ

ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಬ್ಬರಿಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಬ್ಬರಿಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
22 ವರ್ಷದ ಯಲಹಂಕ ನಿವಾಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಚಾಲಕನ ವಿರುದ್ಧ ದೂರು ನೀಡಿದ್ದಾರೆ. 
ಜೆಪಿ. ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಆ.23ರಂದು ಬೆಳಿಗ್ಗೆ 6.30ರ ಸುಮಾರಿಗೆ ಯಲಹಂಕ ನ್ಯೂಟೌನ್ ನಿಂದ ಜೆಪಿ. ನಗರದಲ್ಲಿರುವ ಕಚೇರಿಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಯಲಂಹಕ ನ್ಯೂಟೌನ್ ಗೆ ಬಂದ ಆರೋಪಿ ದೇವಸಂ ಮೊಲ್ಯ, ಯುವತಿಯನ್ನು ತನ್ನ ಕ್ಯಾಬ್ ನಲ್ಲಿ ಹತ್ತಿಸಿಕೊಂಡು ಹೊರಟಿದ್ದ. 
ಮಾರ್ಗ ಮಧ್ಯೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ವೃತ್ತದ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕ ತನ್ನ ಮುಂಬದಿಯಲ್ಲಿ ಕನ್ನಡಿಯಿಂದ ಹಿಂದೆ ಕುಳಿಸಿದ್ದ ಯುವತಿಯನ್ನು ಕೆಟ್ಟ ದೃಷ್ಟಿಯಲ್ಲಿ ಗಮನಿಸುತ್ತಿದ್ದ. ನಂತರ ತನ್ನ ಎಡಗೈನಲ್ಲಿ ಮೊಬೈಲ್ ಹಿಡಿಕೊಂಡು ಮಹಿಳೆಗೆ ಕಾಣುವಂತೆ ಅಶ್ಲೀಲ ವಿಡಿಯೋ ನೋಡುತ್ತಿದ್ದ. ಅಲ್ಲದೆ, ಮಹಿಳೆ ಜೊತೆ ಅಸಲಭ್ವಾಗಿ ವರ್ತಿಸಿದ್ದರ. ಇದರಿಂದ ಆತಂಕಗೊಂಡಿರುವ ಮಹಿಳೆ ಕ್ಯಾಬ್ ನಿಲ್ಲಿಸುವಂತೆ ಹೇಳಿದ್ದಾರೆ. 
ಈ ವೇಳೆ ನಿಮ್ಮ ಲೊಕೇಶನ್ ಇನ್ನೂ ದೂರದಲ್ಲಿದೆ ಎಂದ ಆರೋಪಿ ಕಾರು ನಿಲ್ಲಿಸದೆ ಜೆಪಿ ನಗರದಲ್ಲಿ ಸಂತ್ರಸ್ತೆ ಸೂಚಿಸಿದ ವಿಳಾಸಕ್ಕೆ ಕರೆದೊಯ್ದಿದ್ದಾನೆ. ಇದರಿಂದ ನೊಂದ ಮಹಿಳೆ ಓಲಾ ಸಂಸ್ಥೆಗೆ ಕರೆ ಮಾಡಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತ ಮಹಿಳೆ, ದೇವಸೊಮಾಲಿಯಾ ಎಂಬ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಿದ್ದ. ಮಾತನಾಡುತ್ತಿದ್ದ ವೇಳೆ ತಾನು ಮಧ್ಯಪ್ರದೇಶ ಮೂಲದವನೆಂದು ಹೇಳಿದ್ದ. ಘಟನೆ ಬಳಿಕ ಓಲಾ ಗ್ರಾಹಕ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಆದರೆ, ಈ ವೇಳೆ ಅವರು ಚಾಲಕನ ಮಾಹಿತಿಗಳನ್ನು ಪರಿಶೀಲಿಸದೆಯೇ ಕ್ಯಾಬ್ ಹತ್ತಿದ್ದು ನನ್ನ ತಪ್ಪು ಎಂದು ಹೇಳಿದರು ಎಂದು ಹೇಳಿಕೊಂಡಿದ್ದಾರೆ. 
ತಲೆಮರೆಸಿಕೊಂಡಿರುವ ಚಾಲಕನ ಬಂಧನಕ್ಕಾಗಿ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇನೆ. ಈಗಾಗಲೇ ಪೊಲೀಸರಿಗೆ ಅಗತ್ಯ ಮಾಹಿತಿಗಳನ್ನು ನೀಡಿದ್ದೇವೆ. ಘಟನೆ ಬಳಿಕ ಚಾಲಕನ ಮಾಲೀಕನ್ನು ಓಲಾದಿಂದ ತೆಗೆದು ಹಾಕಲಾಗಿದೆ. ಘಟನೆ ಬಹಳ ಬೇಸರವನ್ನು ತಂದಿದೆ. ಚಾಲಕನ ಗುರ್ತಿಕೆ ಕುರಿತು ಮತ್ತಷ್ಟು ವ್ಯವಸ್ಥೆಗಳನ್ನು ನೀಡಲಾಗುತ್ತಿದೆ. ಚಾಲನೆಗೂ ಮುನ್ನ ಚಾಲಕ ತನ್ನ ಸೆಲ್ಫೀಯನ್ನು ಪ್ರಯಾಣಿಕರಿಗೆ ತೆಗೆದು ಕಳುಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಓಲಾ ವಕ್ತಾರರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com