ದಸರಾ 2018ಕ್ಕೆ ಸುಧಾ ಮೂರ್ತಿ ಚಾಲನೆ: ಸಿಎಂ ಕುಮಾರಸ್ವಾಮಿ

ವಿಶ್ವವಿಖ್ಯಾತ ಮೈಸೂರು ದಸರಾ 2019ರ ಉತ್ಸವಕ್ಕೆ ಈ ಬಾರಿ ಇನ್ಫೋಸಿಸ್ ಫೌಂಡೇಷನ್ಸ್ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2018ರ ಉತ್ಸವಕ್ಕೆ ಈ ಬಾರಿ ಇನ್ಫೋಸಿಸ್ ಫೌಂಡೇಷನ್ಸ್ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಬರ ಮತ್ತು ಪ್ರವಾಹದಿಂದ ರಾಜ್ಯ ತತ್ತರಿಸಿದೆ. ಹೀಗಾಗಿ ಈ ವರ್ಷ ಸರಳ ದಸರಾ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಪ್ರವಾಹದಿಂದಾಗಿ ಕೊಡಗು ಸಂಕಷ್ಟದಲ್ಲಿದೆ, ಕೆಲವೆಡೆ ಬರದ ವಾತಾವರಣ ಉಂಟಾಗಿದೆ. ಮಾಹಿತಿ ಪ್ರಕಾರ 65 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕಾದ ಸ್ಥಿತಿಯಿದೆ. ಹೀಗಾಗಿ ಈ ಬಾರಿ ವೈಭವೀಕರಿಸುವ ದಸರಾ ಸಾಧ್ಯವಿಲ್ಲ. ಬದಲಾಗಿ ಸಂಪ್ರದಾಯಿಕ ಸರಳ ದಸರಾ ನಡೆಯಲಿದೆ. ಈ ಕುರಿತು ದಸರ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂತೆಯೇ ಉತ್ಸವದಲ್ಲಿ ಎಲ್ಲ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಜೊತೆಗೆ ಪ್ರವಾಸಿಗರ ಆರ್ಕಷಿಸುವ ದಸರಾ ನಡೆಸಲಾಗುತ್ತದೆ. ಮೆರವಣಿಗೆಯ ಉದ್ದಕ್ಕೂ ಎಲ್‍ಸಿಡಿ ಪರದೆ ಹಾಕಲಾಗುತ್ತದೆ ಎಂದು ಸಿಎಂ ಎಚ್ ಡಿಕೆ ತಿಳಿಸಿದರು. ಇನ್ನು ಈ ಬಾರಿ ದಸರೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ಹಾಗೂ ಇನ್ಫೋಸಿಸ್ ಫೌಂಡೇಷನ್ಸ್ ನ ಅಧ್ಯಕ್ಷರಾದ ಸುಧಾಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com