ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಹೊರಡಿಸಿ, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಪೇಜಾವರ ಶ್ರೀ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಿ, ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಭಾನುವಾರ ಹೇಳಿದ್ದಾರೆ...
ವಿಶ್ವೇಶ ತೀರ್ಥ ಸ್ವಾಮೀಜಿ
ವಿಶ್ವೇಶ ತೀರ್ಥ ಸ್ವಾಮೀಜಿ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಿ, ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಭಾನುವಾರ ಹೇಳಿದ್ದಾರೆ. 
ಶ್ರೀರಾಮ ಈ ರಾಷ್ಟ್ರದ ಸ್ವಾಭಿಮಾನದ ಪ್ರಶ್ನೆ. ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಒಕ್ಕೊರಲಿನ ಕೂಗು ಭಾನುವಾರ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಯಲ್ಲಿ ಕೇಳಿಬಂತು. 
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ನಿನ್ನೆ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಗೆ ಜನಸಾಗಲವೇ ಹರಿದು ಬಂದಿತ್ತು. ಸಭೆ ಯಶಸ್ವಿಯಾಯಿತು. ಉಡುಪಿ, ಬಾಗಲಕೋಟೆ, ವಿಜಯಪುರದಲ್ಲೂ ಇದೇ ವೇಳೆ ಜನಾಗ್ರಹ ಸಮಾವೇಶ ನಡೆಸಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಹಕ್ಕೊತ್ತಾಯ ಮಂಡಿಸಲಾಗಿಯಿತು. 
ಭಾನುವಾರ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ನಡೆಸಲಾದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಕೆಲವರು ನಮ್ಮನ್ನು ಕೋಮುವಾದಿಗಳೆಂದು ಹೇಳುತ್ತಾರೆ. ಆದರೆ ನಾವು ಕೋಮುವಾದಿಗಳಲ್ಲ. ಪ್ರೇಮವಾದಿಗಳು ಹಾಗೂ ರಾಮವಾದಿಗಳು ಎಂದು ಹೇಳಿದ್ದಾರೆ. 
ನನಗೀಗ 88 ವರ್ಷ ವಯಸ್ಸು. ರಾಮಮಂದಿರ ಆಗುವುದನ್ನು ನೋಡುತ್ತೇನೋ, ಇಲ್ಲವೋ ಎಂಬ ಆಂತಕ ಶುರುವಾಗಿದೆ. ಶೀಘ್ರ ಸುಗ್ರೀವಾಜ್ಞೆಗೆ ಒತ್ತಡ ತರಬೇಕು. ಮಂದಿರವನ್ನು ಪ್ರೀತಿಯಿಂದ ಕಟ್ಟಬೇಕೆಂಬುದು ನಮ್ಮ ಆಶಯವೇ ಹೊರತು ಹಿಂಸಾಚಾರದಿಂದಲ್ಲ. ರಾಮ ಮಂದಿರಕ್ಕಾಗಿ ನಾವು ಭಿಕ್ಷೆ ಬೇಡುತ್ತಿಲ್ಲ. ಇದು ಹಿಂದೂಗಳ ಹೆಮ್ಮೆಗೆ ಸಂಬಂಧಿಸಿತ್ತು. ಹಿಂದೂಗಳ ಆಸೆಗಳಿಗೆ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ಅಯೋಧ್ಯೆ ಕುರಿತಂತೆ ನ್ಯಾಯಾಲಯದ ನಡೆ ಆಘಾತ ಮೂಡಿಸಿದೆ. ತಮಗೆ ಬೇರೆ ಆದ್ಯತೆಗಳಿವೆ ಎಂದು ನ್ಯಾಯಾಲಯ ಕಲಾ ಮುಂದೂಡಿತು. ವ್ಯಭಿಚಾರ ಹೆಚ್ಚಿಸುವ, ಶಬರಿಮಲೆಯಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರಗಳಲ್ಲಿ ಆದ್ಯತೆ ಹೊಂದಿರುವ ನ್ಯಾಯಾಲಯ ಮಂದಿರ ವಿಚಾರದಲ್ಲಿ ಏಕೆ ಹೀಗೆ ಮಾಡುತ್ತಿದೆ ಎಂದು ಅಖಿಲೇಶ್ವರಾನಂದಗಿರಿ ಶ್ರೀಗಳು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com