ಬೆಂಗಳೂರು: ಐಎಎಸ್ ಅಧಿಕಾರಿಗೇ ಆನ್ ಲೈನ್ ಮೂಲಕ 1 ಲಕ್ಷ ರು. ಪಂಗನಾಮ!

ರಾಜ್ಯದ ಐಎಎಸ್ ಅಧಿಕಾರಿಯೊಬ್ಬರ ಖಾತೆಗೇ ಕನ್ನ ಹಾಕಿದ ವ್ಯಕ್ತಿಯೊಬ್ಬ, ಅವರಿಂದಲೇ ಎಟಿಎಂ ಮಾಹಿತಿ ಪಡೆದು 1 ಲಕ್ಷ ರುಪಾಯಿ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಐಎಎಸ್ ಅಧಿಕಾರಿಯೊಬ್ಬರ ಖಾತೆಗೇ ಕನ್ನ ಹಾಕಿದ ವ್ಯಕ್ತಿಯೊಬ್ಬ, ಅವರಿಂದಲೇ ಎಟಿಎಂ ಮಾಹಿತಿ ಪಡೆದು 1 ಲಕ್ಷ ರುಪಾಯಿ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅನಾಮಧೇಯ ವ್ಯಕ್ತಿಯೊಬ್ಬ ತಾನು ಎಸ್ ಬಿಐ ಉದ್ಯೋಗಿ ಎಂದು ಹೇಳಿಕೊಂಡು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರಿಗೆ ಕರೆ ಮಾಡಿ, ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಅದನ್ನು ನವೀಕರಿಸಲು ನಿಮ್ಮ ಖಾತೆ ನಂಬರ್, ಐಎಫ್ ಸಿ ಕೋಡ್, ಕಾರ್ಡ್ ಹಿಂಬಂದಿಯ ನಂಬರ್ ಹೇಳಿ, ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತೇ, ಅದನ್ನು ನನಗೆ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ವ್ಯಕ್ತಿಯ ಕೋರಿಕೆಯಂತೆ ಐಎಎಸ್ ಅಧಿಕಾರಿ ತಮ್ಮ  ಡೆಬಿಟ್ ಕಾರ್ಡ್ ನಂಬರ್ ಹಾಗೂ ಒಟಿಪಿ ತಿಳಿಸಿದ್ದು, ಕೆಲವೇ ನಿಮಿಷದಲ್ಲಿ ಅವರ ಖಾತೆಯಿಂದ 1 ಲಕ್ಷ ರುಪಾಯಿ ಡ್ರಾ ಆಗಿದೆ.
ನವೆಂಬರ್ 19ರಂದು ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಬಸವರಾಜು ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ದೂರು ದಾಖಲಿಸಿಕೊಂಡಿರುವ ಪೊಲೀಸರು ಐಎಎಸ್ ಅಧಿಕಾರಿಗೆ ಟೋಪಿ ಹಾಕಿ ತಲೆಮರೆಸಿಕೊಂಡಿರುವ ಕಿಲಾಡಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com