ಮಂಗಳೂರು: ಆರೋಪಿಯ ಮೊಬೈಲ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಲಂಚ ಕೇಳುವ ಆಡಿಯೊ ಕ್ಲಿಪ್, ತನಿಖೆಗೆ ಆದೇಶ

ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದರೆ ಹೆಡ್ ಕಾನ್ಸ್ಟೇಬಲ್ ಗೆ ಲಂಚ ನೀಡುವುದಾಗಿ ಹೇಳುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದರೆ  ಹೆಡ್ ಕಾನ್ಸ್ಟೇಬಲ್ ಗೆ ಲಂಚ ನೀಡುವುದಾಗಿ ಹೇಳುವ ಆಡಿಯೊ ಕ್ಲಿಪ್ ಹೊರಬಿದ್ದಿದ್ದು ಪೊಲೀಸ್ ಅಧಿಕಾರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮತ್ತು ಆರೋಪಿ ರಫೀಖ್ ಮಧ್ಯೆ ನಡೆದ ಸಂಭಾಷಣೆ ಎಂದು ಹೇಳಲಾಗುತ್ತಿರುವ ಆಡಿಯೊ ಕ್ಲಿಪ್ ನಲ್ಲಿರುವ ಧ್ವನಿ ನಿಜವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಯಾವ ಹೊತ್ತಿನಲ್ಲಿ ಆಡಿಯೊ ಕ್ಲಿಪ್ ದಾಖಲೆ ಮಾಡಿಕೊಳ್ಳಲಾಗಿದೆ ಮತ್ತು ಯಾವ ಸ್ಥಳದಲ್ಲಿ ಎಂಬ ಬಗ್ಗೆ ಕೂಡ ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರ ತಂಡ ರೌಡಿ ತಡೆ ಪಡೆ ರಫೀಖ್ ನನ್ನು ಬಂಧಿಸಿತ್ತು. ತನ್ನ ಕಾರಿನಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ರಫೀಖ್ ಬಂಧಿತನಾಗಿದ್ದ. ಆಡಿಯೊ ಕ್ಲಿಪ್ ರಫೀಖ್ ನ ಮೊಬೈಲ್ ನಲ್ಲಿ ಸಿಕ್ಕಿದ್ದು ಮೊಬೈಲನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಚಂದ್ರಶೇಖರ್ ಮೇಲಿನ ವೈಯಕ್ತಿಕ ದ್ವೇಷದಿಂದ ಆಡಿಯೊ ಕ್ಲಿಪ್ ನ್ನು ಬಹಿರಂಗಪಡಿಸಿರಬಹುದು ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಹಲವು ಕೇಸುಗಳನ್ನು ಹೊರತೆಗೆಯುವಲ್ಲಿ, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ದೂರುಗಳು ಇರಲಿಲ್ಲ, ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿದ್ದರು ಎಂದು ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳುತ್ತಾರೆ.

ರೌಡಿ ವಿರೋಧಿ ತಂಡ ಮತ್ತು ಸಿಸಿಬಿಯಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ್ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ಹಲವು ಮೂಲಗಳಿಂದ ಸಂಪರ್ಕವನ್ನು ಕೂಡ ಹೊಂದಿದ್ದರು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.

ಸಿಸಿಬಿಯಲ್ಲಿರುವಾಗ ಸಂಜೀವ್ ಶೆಟ್ಟಿ ಸಿಲ್ಕ್ಸ್ ಅಂಡ್ ಮೂಲ್ಕಿ ಶೂಟೌಟ್ ಪ್ರಕರಣದಲ್ಲಿ ಭೂಗತ ದೊರೆ ಕಾಳಿ ಯೋಗೀಶ್, ದೀಪಕ್ ರಾವ್ ಮತ್ತು ಬಷೀರ್ ಅಹ್ಮದ್ ಕೊಲೆ ಕೇಸಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಚಂದ್ರಶೇಖರ್ ಭಾಗಿಯಾಗಿದ್ದರು. ಈ ಸಮಯದಲ್ಲಿ ಸಿಸಿಬಿ ತಂಡ ಜಿಲ್ಲಾ ಪೊಲೀಸರಿಗೆ ಅಶ್ರಫ್ ಕಲೈ ಮತ್ತು ಶರತ್ ಮಡಿವಾಳ ಕೊಲೆ ಕೇಸಿನಲ್ಲಿ ಕೂಡ ತನಿಖೆಗೆ ಸಹಕರಿಸಿತ್ತು.

ಆಡಿಯೊ ಟೇಪು ಬಹಿರಂಗದ ಹಿಂದೆ ಪೊಲೀಸ್ ಇಲಾಖೆಯೊಳಗಿರುವ ಯಾರಾದರೂ ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com