ರೈಲು ಡಿಕ್ಕಿ: ಆನೆ ಸಾವು, 6 ತಿಂಗಳಲ್ಲಿ ಸಕಲೇಶಪುರದಲ್ಲಿ 3 ಆನೆ ರೈಲಿಗೆ ಬಲಿ

ರೈಲು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಾಕನಮನೆ ಬಳಿ ಸೋಮವಾರ ಮುಂಜಾನೆ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಕಲೇಪುರ: ರೈಲು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಾಕನಮನೆ ಬಳಿ ಸೋಮವಾರ ಮುಂಜಾನೆ ನಡೆದಿದೆ. 
ಇದರೊಂದಿಗೆ ಕಳೆದ 6 ತಿಂಗಳ ಅವಧಿಯಲ್ಲಿ ರೈಲಿಗೆ ಸಿಲುಕಿ ಒಟ್ಟು 3 ಆನೆಗಳು ಮೃತಪಟ್ಟಂತಾಗಿದೆ. 
ಕಾಕನಮನೆ ಬಳಿಯ 800/30 ಮೈಲಿಗಲ್ಲಿನ ಬಳಿ ಈ ದುರ್ಘಟನೆ ನಡೆದಿದೆ. ಆನೆ ಹಳಿ ದಾಟುವ ಸಂದರ್ಭದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರವಾರ-ಬೆಂಗಳೂರು ಪ್ಯಾಸೆಂಜರಪ್ ರೈಲು ಡಿಕ್ಕಿ ಹೊಡೆದು ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 
ಆಹಾರ ಹುಡುಕಿಕೊಂಡಿ ಬೇಲೂರು ಅಥವಾ ಚಿಕ್ಕಮಗಳೂರು ಕಡೆಯಿಂದ ಆನೆ ಈ ಭಾಗಕ್ಕೆ ಬಂದಿರಬಹುದು. ರೈಲು ಡಿಕ್ಕೆ ಹೊಡೆದ ರಭಸಕ್ಕೆ ಆನೆ ಗಂಭೀರವಾಗಿ ಗಾಯಗೊಂಡಿದ್ದು, ಕೆಲ ಹೊತ್ತಿನಲ್ಲಿಯೇ ರೈಲ್ವೇ ಹಳಿ ಪಕ್ಕವೇ ಕೊನೆಯುಸಿರೆಳೆದಿದೆ ಎಂದು ತಿಳಿಸಿದ್ದಾರೆ. 
ಸಲಗದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲಿಯೇ ನಡೆಸಿ ಅಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದೇ ಜೂ.3 ರಂದು ಸಕಲೇಶಪುರ ತಾಲೂಕು ಯಡಕುಮರಿ ಬಳಿ ರೈಲಿಗೆ ಸಿಲುಗಿ 2 ಮರಿಯಾನೆಗಳು ಬಲಿಯಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com