ರಾಜ್ಯದ್ಯಂತ ಈಗಾಗಲೇ ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ 10-11 ಗಂಟೆ ಕಾಲ 3 ಫೇಸ್ ವಿದ್ಯುತ್ ಅನಧಿಕೃತವಾಗಿ ನೀಡಲಾಗುತ್ತಿದೆ .ಆದರೆ, ಹೆಚ್ಚು ವಿದ್ಯುತ್ ನೀಡುವುದರಿಂದ ಅಂತರ್ಜಲ ಖಾಲಿ ಆಗಿ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ವಿದ್ಯುತ್ ನೀಡಿದರೆ ರೈತರ ಬೆಳೆ ಉಳಿಸಿಕೊಳ್ಳಲು ಅನುವಾಗುತ್ತದೆ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯದ್ಯಂತ 10 ಗಂಟೆಗಳ 3 ಫೇಸ್ ವಿದ್ಯುತ್ ನೀಡುವ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ರೈತರ ಪಂಪ್ ಸೆಟ್'ಗಳ ಸಕ್ರಮಗೊಳಿಸುವ 10 ಸಾವಿರ ಸುಲ್ಕ ಮನ್ನಾ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.