ಕೊಡಗು ಕಾಡಲ್ಲಿ ಗುಂಡಿನ ಚಕಮಕಿ: ಬೇಟೆಗಾರ ಸಾವು

ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಡಿಕೇರಿ: ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ. 
ಕೇರಳ ಮೂಲದ ಎರಡು ಗುಂಪುಗಳು ಬೇಟೆಗೆಂದು ಕೇರಳ-ಕರ್ನಾಟಕ ಗಡಿಭಾಗವಾದ ಮುಂಡ್ರೋಟ್ ಅರಣ್ಯ ಪ್ರದೇಶಕ್ಕೆ ಬಂದಿವೆ. ನಿನ್ನೆ ಮುಂಜಾನೆ 2ರ ವೇಳೆಗ ಗುಂಪುಗಳ ನಡುವೆೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಕೇರಳದ ತಳಿಪರಂಬುವಿನ ಮೀನಂಕೇರಿ ನಿವಾಸಿ ಜಾರ್ಜ್ (50) ಎಂಬುವವರ ಎದೆಗೆ ಗುಂಡು ತಗುಲಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 
ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರ, ಯಾವ ಕಾರಣಕ್ಕೆ ಜಗಳ ಆರಂಭವಾಯಿತು, ಅವರು ಬೇಟೆಗೆದು ಪದೇ ಪದೇ ಈ ಭಾಗಕ್ಕೆ ಬರುತ್ತಿದ್ದರೇ ಎಂಬ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ-ಕೊಡಗು ಗಡಿಭಾಗದಲ್ಲಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವ. ಅಪರೂಪಕ್ಕೆ ಅಲ್ಲೊಂದು, ಇಲ್ಲೊಂದು ಘಟನೆಗಳು ಬೆಳಕಿಗೆ ಬರುತ್ತಿವೆ. ಘಟನೆ ಸಂಬಂಧ ಮೃತ ಜಾರ್ಜ್'ನ ಪತನಿ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com