ಕರ್ನಾಟಕಕ್ಕೆ ಕರಾಳ ಡಿಸೆಂಬರ್: ವಿಷ ಪ್ರಸಾದ, ಬಾಯ್ಲರ್ ಸ್ಫೋಟ, ಇದೀಗ ಕಾಳಿ ನದಿಯಲ್ಲಿ ಮುಳುಗಿ 4 ಸಾವು!

ಡಿಸೆಂಬರ್ ಆರಂಭದಿಂದಲೂ ರಾಜ್ಯದಲ್ಲಿ ಒಂದಲ್ಲ ಒಂದು ಅವಗಡಗಳು ಸಂಭವಿಸಿ ಪ್ರಾಣ ಹಾನಿ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸುಳ್ವಾಡಿ ದೇವಸ್ತಾನದಲ್ಲಿ ವಿಷ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಉತ್ತರ ಕನ್ನಡ: ಡಿಸೆಂಬರ್ ಆರಂಭದಿಂದಲೂ ರಾಜ್ಯದಲ್ಲಿ ಒಂದಲ್ಲ ಒಂದು ಅವಗಡಗಳು ಸಂಭವಿಸಿ ಪ್ರಾಣ ಹಾನಿ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸುಳ್ವಾಡಿ ದೇವಸ್ತಾನದಲ್ಲಿ ವಿಷ ಪ್ರಸಾದ ಸೇವಿಸಿ 14 ಮಂದಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 6 ಮಂದಿ ಸಾವನ್ನಪ್ಪಿದ್ದು ಇದೀಗ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಜಲ ಸಮಾಧಿಯಾಗಿದ್ದಾರೆ. 
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಕಾಳಿ ನದಿಯಲ್ಲಿ ಮುಳುಗಿ ಧೂಳು ಗಾವಡೆ(48), ಕೃಷ್ಣಾ ಧೂಳು(6), ಗಾಯತ್ರಿ ಧೂಳು ಗಾವಡೆ(9) ಹಾಗೂ ಸತೀಶ್ ಗಾವಡೆ(7) ಎಂಬುವರು ಮೃತಪಟ್ಟಿದ್ದಾರೆ. 
ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಕಾಳಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮೃತರೆಲ್ಲರೂ ಒಂದು ಕುಟುಂಬದವರಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com