ಬೆಂಗಳೂರು: ಕೆ.ಆರ್.ಪುರಂ, ಯಲಹಂಕ ರಸ್ತೆಗಳು ಬೈಕ್ ಸವಾರರಿಗೆ 'ಸಾವಿನ ಹಾದಿ'!

ರಾಜಧಾನಿಯ ಕೆ.ಆರ್.ಪುರಂ ಹಾಗೂ ಯಲಹಂಕದ ರಸ್ತೆಗಳು ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ಸಾವಿನ ಹಾದಿಗಳಾಗಿ ಪರಿಣಮಿಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜಧಾನಿಯ ಕೆ.ಆರ್.ಪುರಂ ಹಾಗೂ ಯಲಹಂಕದ ರಸ್ತೆಗಳು ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ಸಾವಿನ ಹಾದಿಗಳಾಗಿ ಪರಿಣಮಿಸಿವೆ. 
ಸಂಚಾರಿ ಪೊಲೀಸರು ಮಾಹಿತಿ ನೀಡಿರುವ ಪ್ರಕಾರ ನವೆಂಬರ್ 30ರವರೆಗೂ ಕೆ.ಆರ್.ಪುರಂ ಒಂದರಲ್ಲಿಯೇ 250 ಅಪಘಾತಗಳು ಸಂಭವಿಸಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಯಲಹಂಕದಲ್ಲಿ 201 ಅಪಘಾತಗಳು ಸಂಭವಿಸಿದ್ದು, 45 ಸಾವುಗಳು ಸಂಭವಿಸಿವೆ. 2017ರಲ್ಲಿ ಕೆ.ಆರ್ ಪುರಂ ನಲ್ಲಿ ಒಟ್ಟು 304 ಅಪಘಾತಗಳು ಸಂಭವಿಸಿದ್ದು, 51 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. 
ಚಿಕ್ಕಜಾಲ, ದೇವನಹಳ್ಳಿ, ಏರ್'ಪೋರ್ಟ್, ಹೆಬ್ಬಾಳ, ಹುಳಿಮಾವು, ರಿಂಗ್ ರೋಡ್, ಹೆದ್ದಾರಿಗಳು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತವೆ. ಈ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಯಲಹಂಕ, ಹೆಬ್ಬಾಳ ಮತ್ತು ದೇವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತವೆ. ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ಪೊಲೀಸರ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಹಳೇ ಮದ್ರಾಸ್ ರಸ್ತೆ ಬಳಿಯಿರುವ ಬಟ್ಟರಹಳ್ಳಿ ಜಂಕ್ಷನ್, ರಾಮಮೂರ್ತಿ ನಗರದ ಬಳಿಯಿರವ ಎಎಸ್ಆರ್ ಕನ್ವೆನ್ಷ.ನ್ ಹಾಲ್, ಲೌರಿ ಮೆಮೊರಿಯಲ್ ಹೈ ಸ್ಕೂಲ್ ಬಳಿ ಹಚ್ಚೆಚ್ಚು ಅಪಘಾತ ಸಂಭವಿಸುತ್ತವೆ ಎಂದು ಕೆಆರ್.ಪುರಂ ಪೊಲೀಸ್ ಠಾಣಾ ಪೊಲೀಸರು ತಿಳಿಸಿದ್ದಾರೆ. 

ಬಟ್ಟರಹಳ್ಳಿ ಜಂಕ್ಷನ್ ಬಳಿ ಸ್ಪೀಡ್ ಬ್ರೇಕರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೂ ನಾವು ಆರ್'ಟಿಒ ಕಚೇರಿಯನ್ನು ಹತ್ತಿರದಲ್ಲಿಯೇ ಸ್ಥಾಪನೆ ಮಾಡಿದ್ದೇವೆ. ಆದರೂ ಹೆದ್ದಾರಿ ಪ್ರಾಧಿಕಾರ ಇದಕ್ಕೂ ಅವಕಾಶವಿಲ್ಲ ಎಂದು ತಿಳಿಸಿದೆ. ಹೀಗಾಗಿ ಸ್ಪೀಡ್ ಬ್ರೇಕರ್ ನಿರ್ಮಾಣಕ್ಕೆ ಅನುಮತಿ ಕೋರಿ ಮತ್ತೆ ಪತ್ರ ಬರೆಯಲಾಗಿದೆ ಎಂದಿದ್ದಾರೆ. 

ಭಟ್ಟರಹಳ್ಳಿ ಟ್ರಾಫಿಕ್ ಸಿಗ್ನಲ್ ಬಿಟ್ಟ ಬಳಿಕ ಸವಾರರು ವೇಗವನ್ನು ಹೆಚ್ಚಿಸುತ್ತಾರೆ. ಇದರಿಂತ ಅಪಘಾತಗಳು ಸಂಭವಿಸುತ್ತವೆ. ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರೇ ಹೆಚ್ಚು ಅಪಘಾತಕ್ಕೀಡಾಗುತ್ತಾರೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com