ಪ್ರಯಾಣಿಕರ ಗಮನಕ್ಕೆ: ನಾಳೆಯೂ ಎಂಜಿ ರಸ್ತೆ - ಇಂದಿರಾನಗರ ಮಧ್ಯೆ ಮೆಟ್ರೋ ಸಂಚಾರ ಇಲ್ಲ

ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಪಿಲ್ಲರ್​ ದುರಸ್ತಿ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ನಾಳೆಯೂ...
ದುರಸ್ಥಿ ಕಾರ್ಯ
ದುರಸ್ಥಿ ಕಾರ್ಯ
Updated on
ಬೆಂಗಳೂರು: ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಪಿಲ್ಲರ್​ ದುರಸ್ತಿ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ನಾಳೆಯೂ ಎಂಜಿ ರಸ್ತೆ ಹಾಗೂ ಇಂದಿರಾನಗರ ನಡುವೆ ಮೆಟ್ರೋ ರೈಲು ಸಂಚರಿಸುವುದಿಲ್ಲ. ಈ ಮಾರ್ಗದಲ್ಲಿ ಮಂಗಳವಾರ ಮೆಟ್ರೋ ಸಂಚಾರ ಪುನಾರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಭಾನುವಾರ ತಿಳಿಸಿದೆ.
ಜನವರಿ 1 ಅಂದರೆ ಹೊಸ ವರ್ಷದಿಂದ ಎಂಜಿ ರಸ್ತೆ- ಇಂದಿರಾನಗರ ಮೆಟ್ರೋ ಸಂಚಾರ ಆರಂಭವಾಗಲಿದೆ. ಉಳಿದಂತೆ ಮೈಸೂರು ರಸ್ತೆಯಿಂದ ಎಂಜಿ ರಸ್ತೆವರೆಗೆ ಮತ್ತು ಇಂದಿರಾನಗರದಿಂದ ಬೈಯಪ್ಪನಹಳ್ಳಿಯವರೆಗೆ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದ್ದು, ಉಳಿದ ಹಸಿರು ಬಣ್ಣದ ಮಾರ್ಗದ ಸಂಚಾರದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಬಿಎಂಆರ್ ಸಿಎಲ್ ಹೇಳಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರ 
ರಾತ್ರಿ 11 ರಿಂದ 2 ಗಂಟೆಯವರೆಗೆ ಮೆಟ್ರೋ ರೈಲು ಸಂಚರಿಸಲಿದ್ದು, ಕಬ್ಬನ್​ ಪಾರ್ಕ್​ನಿಂದ ಬೈಯ್ಯಪ್ಪನಹಳ್ಳಿವರೆಗೆ ಬಸ್​ಗಳು ಸಂಚರಿಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com