ಎಂಜಿ ರಸ್ತೆ ಸ್ಕೈವಾಕ್ ಕಾಮಗಾರಿಯಿಂದ ಹಿಂದೆ ಸರಿದ ಬಿಬಿಎಂಪಿ, ಬೆಂಗಳೂರು ನಾಗರಿಕರಿಗೆ ಸಂದ ಜಯ

ಬೆಂಗಳೂರು ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈವಾಕ್ ಕಾಮಗಾರಿಯನ್ನು ನಾಗರಿಕರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ.
ಎಂಜಿ ರಸ್ತೆ ಸ್ಕೈವಾಕ್ ಕಾಮಗಾರಿಯಿಂದ ಹಿಂದೆ ಸರಿದ ಬಿಬಿಎಂಪಿ
ಎಂಜಿ ರಸ್ತೆ ಸ್ಕೈವಾಕ್ ಕಾಮಗಾರಿಯಿಂದ ಹಿಂದೆ ಸರಿದ ಬಿಬಿಎಂಪಿ
ಬೆಂಗಳೂರು: ಬೆಂಗಳೂರು ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈವಾಕ್ ಕಾಮಗಾರಿಯನ್ನು ನಾಗರಿಕರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ. 
ಕಬ್ಬನ್ ಪಾರ್ಕ್ ಪೋಲೀಸ್ ಠಾಣೆ ಎದುರು ಈ ಸ್ಕೈವಾಕ್ ನಿರ್ಮಾಣವಾಗಬೇಕಾಗಿದ್ದ ಕಾಮಗಾರಿ ಸ್ಥಗಿತಗೊಂಡಿದ್ದು ಈ ಸಕಿವಾಕ್ ನಿರ್ಮಾಣವಾದರೆ ಗಾಂಧಿ ಪ್ರತಿಮೆ ವೀಕ್ಷಣೆಗೆ ಅಡ್ಡಿಯಾಗುವುದು, ಅಲ್ಲದೆ ಈ ಪ್ರದೇಶದಲ್ಲಿ ಸ್ಕಯ್ ವಾಕ್ ಅವಶ್ಯಕತೆ ಇಲ್ಲ ಎಂದು ಕಾಮಗಾರಿಯ ಬಗೆಗೆ ಬೆಂಗಳೂರು ನಾಗರಿಕರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. 
ಬಿಬಿಎಂಪಿ ಈ ಕಾಮಗಾರಿ ನಿರ್ಮಾಣದ ಹಿಂಡೆ ಬೃಹತ್ ಜಾಹೀರಾತು ದಂಧೆ ಕೆಲಸ ಮಾಡಿದೆ ಎಂದು ನಾಗರಿಕರು ಆರೋಪಿಸಿದ್ದರಲ್ಲದೆ  ಈ ಹಿಂದೆ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿರುದ್ಧ್ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತರಿಂದ ಈ ಸ್ಕೈವಾಕ್ ಕಾಮಗಾರಿ ವಿರುದ್ಧ ತಡೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸ್ಕೈವಾಕ್ ನಿರ್ಮಾಣಕ್ಕಾಗಿ ಬಿಬಿಎಂಪಿ 2013ರಲ್ಲಿ ಟೆಂಡರ್ ಕರೆದಿತ್ತು. ಇದು ವಿನ್ಯಾಸ ನಿರ್ಮಾಣ ಹಣಕಾಸು ಕಾರ್ಯನಿರ್ವಹಣೆ ವರ್ಗಾವಣೆ ಮಾದರಿ (ಡಿಬಿಎಫ್ ಓಟಿ) ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿತ್ತು. ಸಾರ್ವಜನಿಕ ಅಭಿಪ್ರಾಯವನ್ನೂ ಕೇಳದೆ ಕಾಮಗಾರಿ ಕೈಗೆತ್ತಿಕೊಂಡಿದ್ದ ಬಿಬಿಎಂಪಿ ಇತ್ತೀಚೆಗೆ ಅಗೆತದ ಕಾರ್ಯ ಪ್ರಾರಂಭಿಸಿತ್ತು. 
ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಕಾಮಗಾರಿಯನ್ನು ತತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಬಿಎಂಪಿಗೆ ಜ.5ರಂದು ಸೂಚನೆ ನೀಡಿದ್ದರು. ಇದಲ್ಲದೆ ಸ್ಕೈವಾಕ್ ಕಾಮಗಾರಿಯನ್ನು ವಿರೋಧಿಸಿ ಜ.21ರಂದು ನಾಗರಿಕರು ನಗರದ ರಿಚ್ ಮಂಡ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com