ಆದರೆ ಕರ್ನಾಟಕದಲ್ಲಿ ಕ್ಯಾಡೆಟ್ ಗಳ ತರಬೇತಿ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ ಅಪಾರವಾಗಿದೆ.ಫೈರಿಂಗ್ ರೇಂಜ್, ಒಬ್ಸ್ಟೆಕಲ್ ಕೋರ್ಸ್, ಡ್ರಿಲ್ ಸ್ಕ್ವೇರ್, ಫ್ಲೈಯಿಂಗ್ ಅಂಡ್ ಫೈರಿಂಗ್, ಆಡಿಟೊರಿಯಂ, ಕಚೇರಿ ಮತ್ತು ಕ್ಯಾಡೆಟ್ ಗಳು ಹಾಗೂ ಸಿಬ್ಬಂದಿ ಸೌಕರ್ಯವಿರುವ ರಾಷ್ಟ್ರೀಯ ಕ್ಯಾಡೆಟ್ ಕೋರ್ ಅಕಾಡೆಮಿಯನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎನ್ನುತ್ತಾರೆ ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ನಿರ್ದೇಶಕ ಕೆಬಿ ಜೈರಾಜ್.