ಶ್ರವಣ ಬೆಳಗೊಳ ಪ್ರಮುಖವಾಗಿ ಜೈನರ ಪವಿತ್ರ ಸ್ಥಳವಾಗಿದ್ದು, ಉತ್ತರ ಭಾರತದಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಸ್ಥಳೀಯರು ತಮ್ಮ ಮನೆ ಬಾಡಿಗೆ ಹೆಚ್ಚಳ ಮಾಡಿದ್ದು, ಶ್ರವಣ ಬೆಳಗೊಳದ ತ್ಯಾಗಿ ನಗರದಲ್ಲಿ ಜೈನ ಧರ್ಮಗುರುಗಳು ಮತ್ತು ನನ್ ಗಳು ಉಳಿದುಕೊಂಡಿರುವ ಒಂದು ಮನೆಗೆ ಒಂದು ತಿಂಗಳಿಗೆ ಬರೊಬ್ಬರಿ 2.5ಲಕ್ಷ ರು.ಬಾಡಿಗೆ ನೀಡಲಾಗುತ್ತಿದೆಯಂತೆ. ಈ ಮನೆಯಲ್ಲಿ ಒಟ್ಟು 8 ಮಂದಿ ತಂಗಿದ್ದಾರೆ ಎನ್ನಲಾಗಿದೆ. ಶ್ರವಣಬೆಳಗೊಳದಲ್ಲಿ ಇಂತಹ ಹತ್ತಾರು ಮನೆಗಳಿದ್ದು, ಇಲ್ಲಿ ನೆಲೆಸಿರುವವರು ದುಬಾರಿ ಹಣ ನೀಡಿ ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.