ಬೆಂಗಳೂರಿನಲ್ಲಿ ದಿನಗೂಲಿ ಮಾಡುತ್ತಿದ್ದ ದೇವೇಂದ್ರಪ್ಪ ರಾಯಚೂರಿಗೆ ಆಗಮಿಸಿದ್ದ. ನಿಲ್ದಾಣದಲ್ಲಿ ಬಸ್'ನ್ನು ಕೀ ಸಮೇತ ನಲ್ಲಿಸಿ ಚಾಲಕ ಟೀ ಕುಡಿಯಲು ಹೋಗಿದ್ದಾನೆ. ಈ ವೇಳೆ ಬಸ್'ನಲ್ಲಿ ಯಾರೂ ಇಲ್ಲದ್ದನ್ನು ನೋಡಿರುವ ದೇವೇಂದ್ರಪ್ಪ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಬಸ್ಸು ಹೋಗುತ್ತಿರುವುದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕ ಬಸ್ಸಿನ ಹಿಂದೆ ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಪ್ರಸ್ತುತ ಪಶ್ಚಿಮ ಠಾಣೆ ಪೊಲೀಸರು ದೇವೇಂದ್ರಪ್ಪ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.