ಕಟ್ಟಡದ ಸಮೀಪ ವಾಸಿಸುತ್ತಿರುವ ಜನರು ಹೇಳುವ ಪ್ರಕಾರ, ಕಟ್ಟಡ ನಿರ್ಮಾಣ ಆರಂಭವಾಗುವ ಹೊತ್ತಿಗೆ ಬೇರೆ ಮಾಲೀಕರಿದ್ದರು. ಕಟ್ಟಡ ನಿರ್ಮಾಣ ಮುಗಿಯುವ ಮೊದಲೇ ಅದನ್ನು ಅವರು ಮಾರಾಟ ಮಾಡಿದ್ದರು. ವರ್ಷಗಳು ಕಳೆದಂತೆ ಜಾಗವು ಬೇರೆ ಬೇರೆ ಮಾಲೀಕರ ಕೈಗೆ ಅದು ಹೋಗಿದ್ದು ಯಾರೊಬ್ಬರೂ ಕೂಡ ಅದರ ಭದ್ರತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಕಟ್ಟಡ ನಿರ್ಮಾಣ ಆರಂಭದಲ್ಲಿ ಕೆಲಸ ಮಾಡುತ್ತಿದ್ದ ಪ್ಲಂಬರ್ ಬಾಬು. ಇವರು ನಿನ್ನೆ ಕಟ್ಟಡ ಕುಸಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ.