ಬೆಳಗಾವಿ: ಪರವಾನಗಿ ವ್ಯಾಪ್ತಿಯ ಹೊರಗೆ ಮದ್ಯವನ್ನು ಪೂರೈಸುತ್ತಿದ್ದ ಬಾರ್ ಅಂಡ್ ರೆಸ್ಟೊರೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯ ಹೊಟೇಲ್ ವೆಸ್ಟರ್ನ್ ಟವರ್ ನ ಹೈಡೌಟ್ ಮೇಲೆ ನಿನ್ನೆ ಪೊಲೀಸರು ದಾಳಿ ನಡೆಸಿದರು.
ಟಾಪ್ ಇನ್ ಟೌನ್ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಮದ್ಯವನ್ನು ಪರವಾನಗಿ ವ್ಯಾಪ್ತಿಯಿಂದ ಹೊರಗೆ ಅಕ್ರಮವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ಪಡೆದ ಪೊಲೀಸರು ಕೂಡಲೇ ಬಾರ್ ಮೇಲೆ ದಾಳಿ ನಡೆಸಿದರು ಎಂದು ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್ ತಿಳಿಸಿದ್ದಾರೆ.
ಅನುಮತಿಯಿಲ್ಲದಿದ್ದರೂ ಬಾರ್ ಅಂಡ್ ರೆಸ್ಟೊರೆಂಟ್ ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಕೂಡ ಮದ್ಯಗಳನ್ನು ಪೂರೈಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಉಪ ಆಯುಕ್ತರು ಮತ್ತು ಮೂವರು ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಲಟ್ಕರ್ ತಿಳಿಸಿದರು.