
ಮಂಗಳೂರು: ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಆಟೋ ಡ್ರೈವರ್ ಧನಂಜಯ್ಯ ಹಾಗೂ ಕುಶಾಲಪ್ಪ ಬಂಧಿತ ಆರೋಪಿಗಳು. ಕೊಕ್ಕಡಾ ನಿವಾಸಿಗಳಾದ ಇವರಿಬ್ಬರು ದೇಲಾಮ್ ಪಾಡಿಯಲ್ಲಿ ಮೊನ್ನೆದಿನ ತನ್ನ ತಂಗಿಗೆ ಮನೆಗೆ ಹೋಗಿ ಹಿಂತಿರುಗುತ್ತಿದ್ದ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು.
ಧನಂಜಯ್ ಸಂತ್ರಸ್ತ ಮಹಿಳೆಯೊಂದಿಗೆ ಮಹಿಳೆಯೊಂದಿಗೆ ಪೋನ್ ಮೂಲಕ ಮಾತನಾಡಿ, ಉಪ್ಪಿನಂಗಡಿಯಲ್ಲಿ ಜರುಗುತ್ತಿರುವ ಧಾರ್ಮಿಕ ಉತ್ಸವಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ಇದಕ್ಕೊಪ್ಪಿದ ಮಹಿಳೆಯನ್ನು ನೇಲ್ಯಾಡಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು ಮಧ್ಯರಾತ್ರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು.
ಉಪ್ಪಿನಂಗಡಿಯಲ್ಲೇ ರಾತ್ರಿ ಇಡೀ ಕಳೆದ ಆ ಮಹಿಳೆ ಶುಕ್ರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement