ಬೆಂಗಳೂರಿಗೆ ಇನ್ನಷ್ಟು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್!

ಬೆಸ್ಕಾಂ ಕಾರ್ಪೋರೇಟ್ ಕಚೇರಿ ಆವರಣದಲ್ಲಿ ಪೆಟ್ರೋಲ್ ಬಂಕ್ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಅನ್ನು ಸೋಮವಾರ ಆರಂಭಿಸಲಾಗಿದೆ...
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್
ಬೆಂಗಳೂರು: ಬೆಸ್ಕಾಂ ಕಾರ್ಪೋರೇಟ್ ಕಚೇರಿ ಆವರಣದಲ್ಲಿ ಪೆಟ್ರೋಲ್ ಬಂಕ್ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಅನ್ನು ಸೋಮವಾರ ಆರಂಭಿಸಲಾಗಿದೆ. 
ಉದ್ಯಾನಗರಿಯಲ್ಲಿ ಮತ್ತೆ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫೇಮ್ ಇಂಡಿಯಾ ಯೋಜನೆ ಅಡಿ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ನಗರದ ಕೆಆರ್ ವೃತ್ತದಲ್ಲಿನ ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಎರಡು ಚಾರ್ಜಿಂಗ್ ಸಾಧನವಿರುವ ಕೇಂದ್ರವನ್ನು ಇಂಧನ ಸಚಿವ ಡಿಕೆ ಶಿವಕುಮಾರ್ ಉದ್ಘಾಟಿಸಿದರು. 
ಇದೇ ವೇಳೆ ಮಾತನಾಡಿದ ಶಿವಕುಮಾರ್ ಅವರು ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್ ವಾಹನವನ್ನು ಕಡಿಮೆ ದರದಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಗಳನ್ನು ನಿರ್ಮಿಸಲಾಗುವುದು ಎಂದರು. 
ಸೆಮಾ ಕನೆಕ್ಟ್ ಹಾಗೂ ಆರ್ ಆರ್ ಟಿ ಎಲೆಕ್ಟ್ರೊ ಪವರ್ ಕಂಪನಿಗಳು ಎರಡು ಕಡೆ ಅಳವಡಿಸಿರುವ ಯಂತ್ರಗಳು 15 ಕೆವಿ ಸಾಮರ್ಥ್ಯ ಹೊಂದಿದೆ. ಎಲೆಕ್ಟ್ರಿಕ್ ಕಾರು ನಿರಂತರ 1 ಗಂಟೆ 20 ನಿಮಿಷ ಚಾರ್ಜ್ ಮಾಡಿದರೆ 125 ಕಿಮೀ ಕ್ರಮಿಸಬಹುದು. ಈ ರೀತಿ ನಿತ್ಯ 20 ಕಾರು ಚಾರ್ಚ್ ಮಾಡಬಹುದು. ಎಲೆಕ್ಟ್ರಿಕ್ ವಾಹನವಿರುವವರು ಮನೆಯಲ್ಲಿ ಚಾರ್ಚ್ ಮಾಡಿದರೆ ಪ್ರತಿ ಯೂನಿಟ್ ಗೆ 6 ರಿಂದ 7 ರೂಪಾಯಿ ಭರಿಸಬೇಕಾಗುತ್ತದೆ. ಆದರೆ ಈ ಕೇಂದ್ರದಲ್ಲಿ ಬೆಳಗ್ಗೆ 6 ರಿದಂ ರಾತ್ರಿ 10ರವರೆಗೆ ಚಾರ್ಚ್ ಮಾಡಿಕೊಂಡರೆ ಪ್ರತಿ ಯೂನಿಟ್ ಗೆ 4.85 ರೂ. ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಚಾರ್ಚ್ ಮಾಡಿದರೆ 3.85 ರೂ. ಪಾವತಿಸಿದರೆ ಸಾಕು. ಒಂದು ಯಂತ್ರ ಅಳವಡಿಕೆಗೆ 5 ಲಕ್ಷ ರುಪಾಯಿ ವೆಚ್ಚವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com