ಕರ್ನಾಟಕ: ವನ್ಯಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ರೈತರ ವಿದ್ಯುತ್ ಪರಿವರ್ತಕ ತಂತಿ ಬೇಲಿ

ಬೆಳೆಗಳ ರಕ್ಷಣೆಗಾಗಿ ರೈತರು ಅಕ್ರಮವಾಗಿ ಹಾಕುತ್ತಿರುವ ವಿದ್ಯುತ್ ಪರಿವರ್ತಕ ತಂತಿ ಬೇಲಿಗಳು ವನ್ಯಜೀವಿಗಳಿಗೆ ಆಪತ್ತನ್ನು ಎದುರು ಮಾಡುತ್ತಿವೆ...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ
ಬೆಂಗಳೂರು: ಬೆಳೆಗಳ ರಕ್ಷಣೆಗಾಗಿ ರೈತರು ಅಕ್ರಮವಾಗಿ ಹಾಕುತ್ತಿರುವ ವಿದ್ಯುತ್ ಪರಿವರ್ತಕ ತಂತಿ ಬೇಲಿಗಳು ವನ್ಯಜೀವಿಗಳಿಗೆ ಆಪತ್ತನ್ನು ಎದುರು ಮಾಡುತ್ತಿವೆ. 
ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಚಿರತೆಗಳು ಮೃತಪಟ್ಟಿದ್ದವು. ಕೊಳ್ಳೆಗಾಲ ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ 4 ವರ್ಷದ ಚಿರತೆ ಸಾವನ್ನಪ್ಪಿದೆ. 
ರೈತ ಸುರೇಶ್ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದ ಜೋಳದ ಫಸಲಿನ ರಕ್ಷಣೆಗಾಗಿ ವಿದ್ಯುತ್ ತಂತಿ ಬೇಲಿ ಹಾಕಿದ್ದಾರೆ. ಇದನ್ನು ದಾಟಲು ಬಂದಿರುವ ಚಿರತೆಗೆ ವಿದ್ಯುತ್ ತಗುಲಿದೆ. ವಿದ್ಯುತ್ ಪ್ರಮಾಣ ತೀವ್ರವಿದ್ದರಿಂದ ಚಿರತೆಯ ಕತ್ತಿನ ಭಾಗ ಸುಟ್ಟುಹೋಗಿ ಸ್ಥಳದಲ್ಲಿಯೇ ಮೃತಪಟ್ಟಿದೆ. ಪ್ರಕರಣ ಸಂಬಂಧ ಪೊಲೀಸರು ರೈತ ಸುರೇಶ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ. 
ರೈತರನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಕೆಪಿಟಿಸಿಎಲ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಉತ್ತಮವಾಗಿದೆ. ತಮ್ಮ ಬೆಳೆಗಳು ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಇಲ್ಲಿನ ರೈತರು ವಿದ್ಯುತ್ ಪರಿವರ್ತಕ ಬೇಲಿಗಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂು ಅಧಿಕಾರಿಗಳು ಹೇಳಿದ್ದಾರೆ. 
2017 ಜನವರಿ ತಿಂಗಳಿನಲ್ಲಿ ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 13 ಚಿರತೆಗಳು ಹಾಗೂ ಆನೆಗಳು ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿವೆ. ಚಿರತೆ ಹಾಗೂ ಆನೆಗಳು ಸುಲಭವಾಗಿ ಸಿಗುವ ಆಹಾರವನ್ನು ಅರಸಿ ಬರುತ್ತವೆ. ಚಿರತೆಗಳು ಬೀದಿ ನಾಯಿಗಳು ಹಾಗೂ ಕುರಿಗಳನ್ನು ಹುಡುಕಿಕೊಂಡು ಬಂದರೆ, ಆನೆಗಳು ಬಾಳೆಹಣ್ಣು, ಕಬ್ಬು ಹಾಗೂ ತೆಂಗನ್ನು ಹುಡುಕಿಕೊಂಡು ಬರುತ್ತವೆ. 
ವನ್ಯಜೀವಿ ಹೋರಾಟಗಾರ ಜಿ.ವೀರೇಶ್ ಅವರು ಮಾತನಾಡಿ, ಭದ್ರಾದಲ್ಲಿ ಕಳೆದ 4-5 ವರ್ಷಗಳಿಂದ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪುತ್ತಿರುವ ಆನೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಸಂಬಂಧ ಅಧಿಕಾರಿಗಳು ಯಾವುದೇ ರೀತಿಯ ಕಠಿಣ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com