ಮಂಗಳೂರು: ಇತರರಿಗೆ ಮಾದರಿಯಾಗುವಂತ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಸಂಚಾರಿ ಪೊಲೀಸ್ ಪೇದೆಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ.
ಗುರುವಾರ ಬೆಳಗ್ಗೆ ರೇವಣ ಸಿದ್ದಪ್ಪ ಸುಮಾರು 20 ನಿಮಿಷಗಳ ಕಾಲ ವಾಹನಗಳನ್ನು ತಡೆದು, ಬಂಟ್ಸ್ ಹಾಸ್ಟೆಲ್ ಬಳಿಯ ಕಾಂಕ್ರೀಟ್ ರಸ್ತೆಗೆ ಲೋಹದ ತಂತಿ ಜೋಡಿಸಿದ್ದಾರೆ.
ರಸ್ತೆಯಲ್ಲಿದ್ದ ಲೋಹದ ತಂತಿ ಎದ್ದಿದ್ದ ಕಾರಣ ಬೈಕ್ ಸವಾರನೊಬ್ಬ ಬಿದ್ದಿದ್ದ, ಹೀಗಾಗಿ ಅದನ್ನು ನೋಡಿದ ರೇವಣ ಸಿದ್ದಪ್ಪ ಮರುದಿನ ಬೆಳಗ್ಗೆ ರಸ್ತೆಯ ಮೇಲಿದ್ದ ಲೋಹದ ತಂತಿಯನ್ನು ಜೋಡಿಸಿದ್ದಾರೆ. ಕಳೆದ ಹಲವು ತಿಂಗಳಿಂದ ಲೋಹದ ತಂತಿ ಮೇಲೆದಿದ್ದರೂ ಕಾರ್ಪೋರೇಷನ್ ಕಣ್ಣು ಮುಚ್ಚಿ ಕುಳಿತಿತ್ತು.
ರೇವಣ ಸಿದ್ದಪ್ಪ ಅವರು ರಸ್ತೆಯಲ್ಲಿ ರಿಪೇರಿ ಮಾಡುವುದನ್ನು ಪಕ್ಕದ ಅಂಗಡಿಯ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದರು. ನಂತರ ವಿಡಿಯೋವನ್ನು ವೈರಲ್ ಆಗಿತ್ತು. ಇದನ್ನು ನೋಡಿದ ಮಂಗಳೂರು ಪೊಲೀಸ್ ಆಯುಕ್ತ ಟಿ ಸುರೇಶ್ ರೇವಣ್ಣ ಸಿದ್ದಪ್ಪ ಅವರಿಗೆ ನಗದು ಬಹುಮಾನ ನೀಡಿದ್ದಾರೆ.