ಸಾಲು ಮರದ ತಿಮ್ಮಕ್ಕ
ಸಾಲು ಮರದ ತಿಮ್ಮಕ್ಕ

ಸರ್ಕಾರ ನೀಡಿದ್ದ ರೂ.10 ಲಕ್ಷ ಪರಿಹಾರ ನಿರಾಕರಿಸಿದ ಸಾಲು ಮರದ ತಿಮ್ಮಕ್ಕ

ವೃಕ್ಷ ಮಾತೆ ಎಂದೇ ಖ್ಯಾತಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರು ರಾಜ್ಯ ಸರ್ಕಾರ ನೀಡಿದ್ದ ರೂ.10 ಲಕ್ಷ ವೈದ್ಯಕೀಯ ಪರಿಹಾರವನ್ನು ಸೋಮವಾರ ನಿರಾಕರಿಸಿದ್ದಾರೆ...
ಬೆಂಗಳೂರು: ವೃಕ್ಷ ಮಾತೆ ಎಂದೇ ಖ್ಯಾತಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರು ರಾಜ್ಯ ಸರ್ಕಾರ ನೀಡಿದ್ದ ರೂ.10 ಲಕ್ಷ ವೈದ್ಯಕೀಯ ಪರಿಹಾರವನ್ನು ಸೋಮವಾರ ನಿರಾಕರಿಸಿದ್ದಾರೆ. 
ಸರ್ಕಾರದ ಪರಿಹಾರ ಧನವನ್ನು ನಿರಾಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿ.29 ರಂದು ಪತ್ರ ಬರೆದಿರುವ ಸಾಲು ಮರದ ತಿಮ್ಮಕ್ಕಅವರು, ಯಾರಿಗೇ ಆದರೂ ಜಾತಿ ಆಧಾರದ ಮೇಲೆ ಪುರಸ್ಕಾರಗಳನ್ನು ನೀಡಬಾರದು ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಉಸಿರಾಟ ಸಮಸ್ಯೆಯಿಂದಾಗಿ ಸಾಲುಮರದ ತಿಮ್ಮಕ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ವೆಚ್ಚ ರೂ.10 ಲಕ್ಷವನ್ನು ನೀಡಲು ಮುಂದಾಗಿದ್ದರು. ಸರ್ಕಾರ ವರ್ತನೆಗಳಿಗೆ ಬೇಸರಗೊಂಡಿದ್ದ ತಿಮ್ಮಕ್ಕ ಅವರು ಪರಿಹಾರ ಧನವನ್ನು ನಿರಾಕರಿಸಿದ್ದರು. 
ಬಳಿಕ ಅ.27 ರಂದು ಬಳಿಕ ಸ್ವತಃ ಸಿದ್ದರಾಮಯ್ಯ ಅವರೇ ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಈ ವೇಳೆ ಸಾಲುಮರದ ತಿಮ್ಮಕ್ಕ ಅವರ ಮನವೊಲಿಸಿ ಭರವಸೆಗಳನ್ನು ತಿಂಗಳೊಳಗಾಗಿ ಈಡೇರಿಸುವುದಾಗಿ ತಿಳಿಸಿ ಚೆಕ್ ಮೂಲಕ ರೂ.10 ಲಕ್ಷವನ್ನು ನೀಡಿದ್ದರು. 
ಸರ್ಕಾರ ನೀಡಿದ್ದ ಈ ಹಣವನ್ನಾಗಲೀ ಅಥವಾ ಪಿಂಚಣಿ ಹಣವನ್ನಾಗಲಿ ಸಾಲುಮರದ ತಿಮ್ಮಕ್ಕ ಅವರು ಬಳಕೆ ಮಾಡಿಕೊಂಡಿಲ್ಲ. ದಲಿತ ಮಹಿಳೆಯಾಗಿರುವ ಕಾರಣ ನಾನು ಈ ಪರಿಸ್ಥಿತಿಯಲ್ಲಿದ್ದೇನೆ. ಯಾವುದೇ ವ್ಯಕ್ತಿಯನ್ನಾದರೂ ಜಾತಿ ಆಧಾರತ ಮೇಲೆ ಗುರ್ತಿಸುವುದು ಅಥವಾ ಪುರಸ್ಕರಿಸುವ ಕೆಲಸಗಳು ಆಗಬಾರದು. ನನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ನನ್ನ ದತ್ತು ಪುತ್ರ ನನ್ನನ್ನು ಹಾಗೂ ನನ್ನ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರೀತಿ ಹಾಗೂ ಕಾಳಜಿಯಿಂದಲೇ ಇಂದಿಗೂ ನಾನು ಬದುಕಿದ್ದೇನೆಂದು ತಿಮ್ಮಕ್ಕ ಅವರ ಪತ್ರದಲ್ಲಿ ತಿಳಿಸಿದ್ದಾರೆ. 
ಎರಡು ವರ್ಷಗಳ ಹಿಂದೆ ಸರ್ಕಾರ ಹಣ ಹಾಗೂ ಭೂಮಿ ನೀಡುವ ಕುರಿತು ಭರವಸೆಗಳನ್ನು ನೀಡಿತ್ತು. ಆದರೆ, ಆ ಭರವಸೆಗಳು ಈಡೇರಿಲ್ಲ ಎಂದಿರುವ ತಿಮ್ಮಕ್ಕ ಅವರು, ನೀಡಲಾಗಿರುವ ಪರಿಹಾರ ಧನವನ್ನು ಹಿಂತಿರುಗಿಸಲು ನಿರ್ಧರಿಸಿದ್ದು, ಹೀಗಾಗಿ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದು ತಿಮ್ಮಕ್ಕ ಅವರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ ತಿಂಗಳೊಳಗಾಗಿ ನನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದರು. ಭರವಸೆ ನೀಡಿ ಎರಡು ತಿಂಗಳಾದರೂ ಯಾವುದೂ ಈಡೇರಿಲ್ಲ. ರಣಜಿ ಕ್ರಿಕೆಟ್ ಆಟಗಾರರು, ಗ್ರ್ಯಾಮಿ ಪ್ರಶಸ್ತಿ, ಕಲಾವಿದರು ಹಾಗೂ ಇತರರಿಗೆ ಸರ್ಕಾರ ಕೊಡುಗೆಗಳನ್ನು ನೀಡುತ್ತಿದ್ದು, ನನಗೆ ನೀಡಬೇಕಿರುವ ಪುರಸ್ಕಾರಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ಬಹಳ ನೋವು ತಂದಿದೆ ಎಂದು ತಿಮ್ಮಕ್ಕ ಅವರು ಹೇಳಿಕೊಂಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com