ಎಂಎಂ ಕಲಬುರ್ಗಿ ಹತ್ಯೆ ಪ್ರಕರಣ: ಎನ್ಐಎ, ಸಿಬಿಐ, ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ಚಾರವಾದಿ, ಸಾಹಿತಿ ಎಂ ಎಮ್ ಕಲಬುರ್ಗಿ ಹತ್ಯೆ ಸಂಬಂಧ ಎಸ್ ಐಟಿ ತನಿಖೆ ನಡೆಸಬೇಕೆಂದು ಮನವಿ ಬಂದಿರುವ ಹಿನ್ನೆಲೆಯಲ್ಲಿ..........
ಎಂಎಂ ಕಲಬುರ್ಗಿ
ಎಂಎಂ ಕಲಬುರ್ಗಿ
ನವದೆಹಲಿ: ವಿಚಾರವಾದಿ, ಸಾಹಿತಿ ಎಂ ಎಮ್ ಕಲಬುರ್ಗಿ ಹತ್ಯೆ ಸಂಬಂಧ ಎಸ್ ಐಟಿ ತನಿಖೆ ನಡೆಸಬೇಕೆಂದು ಮನವಿ ಬಂದಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳ, ಸಿಬಿಐ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚುಡ್ ಇವರಿದ್ದ ಪೀಠವು ಲೇಖಕನ ಪತ್ನಿ ಉಮಾ ದೇವಿ ಕಲಬುರ್ಗಿಸಲ್ಲಿಸಿದ ಅರ್ಜಿಯನ್ನು ಪರ್ಶೀಲಿಸಿದ್ದು ಆರು ವಾರಗಳಲ್ಲಿ ತನಿಖಾ ಸಂಸ್ಥೆಗಳು ಮತ್ತು ಎರಡು ರಾಜ್ಯಗಳ ಸರ್ಕಾರಗಳು ನೋಟೀಸ್ ಗೆ ಉತ್ತರಿಸಬೇಕೆಂದು ಆದೇಶಿಸಿದೆ.
ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಮತ್ತು ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ಮಾದರಿಯಲ್ಲೇ ತನ್ನ ಪತಿಯನ್ನೂ ಹತ್ಯೆ ಮಾಡಿದ್ದಾರೆ ಎಂದು ಉಮಾ ದೇವಿ ಕಲಬುರ್ಗಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.
ಕಲಬುರ್ಗಿ ಅವರನ್ನು ಅವರ ಮನೆಯಲ್ಲೇ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com