ಬೆಂಗಳೂರಿನಲ್ಲಿ ಹಕ್ಕಿ ಜ್ವರ ಭೀತಿ: ಚಿಕನ್ ತಿನ್ನಲು ಸುರಕ್ಷಿತ ಎಂದ ಸಚಿವರು

ಬೆಂಗಳೂರು ಮತ್ತು ಮಂಡ್ಯದಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚಿಕನ್ ತಿನ್ನಲು ಸುರಕ್ಷಿತ ಎಂದು ಪಶು ಸಂಗೋಪನ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಬೆಂಗಳೂರು ಮತ್ತು ಮಂಡ್ಯದಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚಿಕನ್ ತಿನ್ನಲು ಸುರಕ್ಷಿತ ಎಂದು ಪಶು ಸಂಗೋಪನ ಸಚಿವ ಎಂ ಮಂಜು ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 29ರಂದು ಬೆಂಗಳೂರಿನ ಕನಕಪುರ ರಸ್ತೆ ದಾಸರಹಳ್ಳಿಯ ಚಿಕನ್ ಸೆಂಟರ್ ನ ಕೋಳಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಪ್ರಾಥಮಿಕ ತನಿಖೆಯಲ್ಲಿ ಅವುಗಳಲ್ಲಿ ಎಚ್5 ಎನ್1 ಹಕ್ಕಿ ಜ್ವರದ ವೈರಸ್ ಪತ್ತೆಯಾಗಿತ್ತು. ಬಳಿಕ ಮೃತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೂಪಾಲದ "ನ್ಯಾಷನ್‌ನಲ್‌ ಇನ್ಸಿಟಿಟ್ಯೂಟ್‌ ಆಫ್ ಹೈಸೆಕ್ಯೂರಿಟಿ ಅನಿಮಲ್‌ ಡಿಸೀಸ್‌' (ಎನ್‌ಐಎಚ್‌ಎಸ್‌ಎಡಿ)ಗೆ ರವಾನಿಸಲಾಗಿತ್ತು.
ಇದೀಗ ಎನ್‌ಐಎಚ್‌ಎಸ್‌ಎಡಿ ವರದಿ ಬಂದಿದ್ದು, ಹಕ್ಕಿ ಜ್ವರ ಅಲ್ಲ ಎಂಬುದು ದೃಢಪಟ್ಟಿರುವುದಾಗಿ ಸಚಿವರು ತಿಳಿಸಿದ್ದಾರೆ.
ಮಂಡ್ಯದಲ್ಲಿ ಕೋಳಿಗಳು ಎಚ್ ಐ ವೈರಸ್ ನಿಂದಾಗಿ ಮೃತಪಟ್ಟಿದ್ದು, ಎಚ್ 5 ಎನ್ 1 ನಿಂದ ಅಲ್ಲ. ಎಚ್ 5 ನಿಂದ ಮನುಷ್ಯರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಎನ್‌ಐಎಚ್‌ಎಸ್‌ಎಡಿ ದಾಸರಹಳ್ಳಿಯಲ್ಲಿ ಮೃತಪಟ್ಟ ಕೋಳಿಗಳ ಪರೀಕ್ಷಾ ವರದಿ ಇನ್ನೂ ನೀಡಿಲ್ಲ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com