ಬೆಂಗಳೂರು: ಬಿಪಿಎಲ್ ಕಾರ್ಡ್ ಗಾಗಿ ಕಾಯುತ್ತಿರುವ ಈ ಕ್ಯಾನ್ಸರ್ ಪೀಡಿತರ ನೋವಿಗೆ ಕೊನೆ ಎಂದು?

ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಪ್ರೊಜೆಕ್ಟರ್ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಇದೀಗ ದಿಕ್ಕೆಟ್ಟು ಕುಳಿತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಪ್ರೊಜೆಕ್ಟರ್ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಇದೀಗ ದಿಕ್ಕೆಟ್ಟು ಕುಳಿತಿದ್ದಾರೆ. ಜಿ. ವಾಸುದೇವ್ (74) ಎನ್ನುವ ವೃದ್ದರಿಗೆ ಚಿತ್ರಮಂದಿರ ಮುಚ್ಚಿದ ಕಾರಣ ಕೆಲಸವಿಲ್ಲದಂತಾಗಿದೆ. ಜತೆಗೆ ಮಾರಕ ಕ್ಯಾನ್ಸರ್ ಸಹ ತಗುಲಿದ ಕಾರಣ ಅದಕ್ಕಾಗಿ ಸೂಕ್ತ ಚಿಕಿತ್ಸೆ ಪಡೆಯಲೂ ಸಾದ್ಯವಾಗದ ಸ್ಥಿತಿ ಇದೆ.
ಬಡತನ ರೇಖೆಗಿಂತ ಕೆಳಗಿನವರಿಗೆ ಕ್ಯಾನ್ಸರ್ ಸೇರಿ ಮಾರಕ ಖಾಯಿಲೆಗಳಿಗಾಗಿನ ಚಿಕಿತ್ಸೆಯಲ್ಲಿ ರಿಯಾಯಿತಿ ಸಿಗಲಿದೆ. ಬಿಪಿಎಲ್ ಕಾರ್ಡು ದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಈ ಸೌಲಭ್ಯ ಲಭಿಸಲಿದ್ದು ವಾಸುದೇವ್ ಇದಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಇದುವರೆಗೂ ಅವರಿಗೆ ಬಿಪಿಎಲ್ ಕಾರ್ಡ್ ದೊರಕಲಿಲ್ಲ. ಇದು ವರರಲ್ಲಿ ನಿರಾಶೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶವನ್ನುಂಟು ಮಾಡಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಹಲಸೂರಿನ ಚಿಕ್ಕ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಹಾಗೂ ಮಕ್ಕಳೊಡನೆ ವಾಸ್ತವ್ಯ ಇರುವ ವಾಸುದೇವ್ ಅವರಿಗೆ ಒಮ್ಮೆ ಕ್ಯಾನ್ಸರ್ ಚಿಕಿತ್ಸೆ ನೀಡಲು ಸುಮಾರು 7,000 ಖರ್ಚು ತಗುಲುತ್ತದೆ. ಕುಟುಂಬದ ಆದಾಯ ಮೂಲ ಅಷ್ಟಿಲ್ಲದ್ಸ್ ಕಾರಣ ಚಿಕಿತ್ಸಾ ವೆಚ್ಚ ಭರಿಸುಉವುದು ಅತ್ಯಂತ ದುರ್ಭರ ಎನ್ನುವಂತಾಗಿದೆ.
"ಕಳೆದ ವರ್ಷ ಜನವರಿ-ಫೆಬ್ರವರಿ ಅವಧಿಯಲ್ಲಿ ನನ್ನ ಗಂಟಲಿನ ಬಲ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ನಾನು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದೆನು. ಆದರೆ ನೋವು ಕಡಿಮೆಯಾಗಲಿಲ್ಲ ಮತ್ತು ಕೆಲ ದಿನಗಳ ನಂತರ ಗಂಟಲಿನ ನೋವಿನ ಭಾಗದಲ್ಲಿ ಗಡ್ಡೆಯೊಂದು ಬೆಳೆಯಿತು.  ಇದು ಅಸಹನೀಯ ನೋವಿನಿಂದ ಕೂಡಿದ್ದು ನಾನು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದೆ, ಅಲ್ಲಿ ಇ ಎನ್ ಟಿ ತಜ್ಞರು ಪರೀಕ್ಷೆ ನಡೆಸಿ ಇದು ಕ್ಯಾನ್ಸರ್ ಎಂದು ಶಂಕಿಸಿದ್ದರು. ಮತ್ತು ಕಿಡ್ವಾಯಿಗೆ ತೆರಳುವಂತೆ ಸೂಚಿಸಿದರು. ವಿಕ್ಟೋರಿಯಾ ಮತ್ತು ಕಿಡ್ವಾಯಿ ಆಸ್ಪತ್ರೆಗಳಲ್ಲಿ ವೈದ್ಯರು ಬಿಪಿಎಲ್ ಕಾರ್ಡ್ ಕೇಳಿದರು, ಅದು ನನ್ನ ಬಳಿ ಇಲ್ಲ," ವಾಸುದೇವ್ ಹೇಳಿದ್ದಾರೆ. ಈ ನಡುವೆ ವಾಸುದೇವ್ ಗೆ ಕ್ಯಾನ್ಸರ್ ಆಗಿರುವುದು ದೃಢಪಟ್ಟಿದೆ
ಸದ್ಯ ವಾಸುದೇವ್ ಅವರ ಪುತ್ರಿ ಮಂಜುಳಾ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.. "ನನ್ನ ಸೀಮಿತ ಸಂಪನ್ಮೂಲಗಳೊಂದಿಗೆ ನಾನು ಅವರನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ ಮೂವರು ಮಕ್ಕಳನ್ನೂ ನಾನು ಸಾಕುತ್ತಿದ್ದು ಅವರ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಹೊಂದಿಸುವುದೇ ಕಷ್ಟವಾಗುತ್ತಿದೆ. " ಮಂಜುಳಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ
ವಾಸುದೇವ್ 21 ದಿನಗಳಿಗೆ ಒಮ್ಮೆ  ಕಿಮೋ ಥೆರಪಿ ಚಿಕಿತ್ಸೆ ಪಡೆಯಬೇಕಿದೆ , ಅದಕ್ಕೆ 7,000 ರೂ. ಖರ್ಚು ತಗುಲುತ್ತದೆ. ಇದಲ್ಲದೆ ರಕ್ತ ಪರೀಕ್ಷೆಗೆ ತಿಂಗಳಿಗೆ ಎರಡು ಬಾರಿ ಅವರು 1,200 ರೂ. ಖರ್ಚು ಮಾಡುತ್ತಿದ್ದಾರೆ. "ನಾನು ಇದಕ್ಕಾಗಿ ತನ್ನ ಗೆಳೆಯರಿಂದ ಸಾಲ ಪಡೆದಿದ್ದೇನೆ, ನನ್ನ ಒಡವೆಗಳನ್ನು ಗಿರವಿ ಇಟ್ಟಿದ್ದೇನೆ." ಮಂಜುಳಾ ಹೇಳಿದರು.
ಆಸಂವಿಧಾನದ ರ್ಟಿಕಲ್ 21ರ ಅನುಸಾರ ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯು ಮೂಲಭೂತ ಹಕ್ಕು. ವಾಸುದೇವ್ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ. ಇವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹ ವ್ಯಕ್ತಿ ಎಂದು ಸಾಮಾಜಿಕ ಹೋರಾಟಗಾರರಾದ ಕಾಳಿದಾಸ ರೆಡ್ಡಿ ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯುಟಿ ಖಾದರ್ ಅವರನ್ನು ಈ ಕುರಿತಂತೆ ಪ್ರಶ್ನಿಸಿದಾಗ "ವಾಸುದೇವ್ ಅತಿ ಶೀಘ್ರದಲ್ಲಿ ಬಿಪಿಎಲ್ ಕಾರ್ಡ್ ಹೊಂದಲಿದ್ದಾರೆ" ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com