ಇಂದಿರಾ ಕ್ಯಾಂಟೀನ್'ನಂತೆ ಮರಳು ಡಿಪೋಗಳನ್ನೇಕೆ ತೆರೆಯಬಾರದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅವಾಸ್ತವಿಕ ಹಾಗೂ ಅವೈಜ್ಞಾನಿಕ ಮರಳು ಹರಾಜು ನೀತಿ ಕುರಿತಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಇಂದಿರಾ ಕ್ಯಾಂಟೀನ್, ಪಡಿತರ ಧಾನ್ಯಗಳನ್ನು ವಿತರಿಸುವ ಡಿಪೋಗಳ ಮಾದರಿಯಂತೆಯೇ ಮರಳು ಡಿಪೋಗಳನ್ನೇಕೆ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅವಾಸ್ತವಿಕ ಹಾಗೂ ಅವೈಜ್ಞಾನಿಕ ಮರಳು ಹರಾಜು ನೀತಿ ಕುರಿತಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಇಂದಿರಾ ಕ್ಯಾಂಟೀನ್, ಪಡಿತರ ಧಾನ್ಯಗಳನ್ನು ವಿತರಿಸುವ ಡಿಪೋಗಳ ಮಾದರಿಯಂತೆಯೇ ಮರಳು ಡಿಪೋಗಳನ್ನೇಕೆ ತೆರೆಯಬಾರದು ಎಂದು ರಾಜ್ಯ ಸರ್ಕಾರವನ್ನು ಮಂಗಳವಾರ ಪ್ರಶ್ನಿಸಿದೆ. 
ಮರಳು ಹರಾಜು ಪ್ರಕರಣವೊಂದರ ಅರ್ಜಿ ಸಂಬಂಧ ನಿನ್ನೆ ವಿಚಾರಣೆ ನಡೆಸುತ್ತಿದ್ದ ವೇಳೆ, ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹರಾಜು ನೀತಿ ಬಗ್ಗೆ ಹಂಗಾಮಿ ಮುಖ್ಯ ನ್ಯಾಯಾಮೂರ್ತಿ ಹೆಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತು. ಅಲ್ಲದೆ, ಜೀವಮಾನದಲ್ಲಿಯೇ ಇಂತಹ ಪ್ರಕರಣವನ್ನು ನೋಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. 
ರಾಜ್ಯದಲ್ಲಿ ಖಾಸಗಿಯವರು ಮರಳು ಮಾರಾಟ ಮಾಡುವುದರ ಮೇಲೆ ನಿರ್ಬಂಧ ಹೇರಿ, ನ್ಯಾಯಾಬೆಲೆ ಅಂಗಡಿ ಹಾಗೂ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ಸರ್ಕಾರದಿಂದಲೇ ಡಿಪೋಗಳನ್ನು ತೆರೆದು ಮರಳು ವಿಚರಣೆ ಮಾಡಿ. ಆಗ ಮರಳು ಸಮಸ್ಯೆ ಉದ್ಭವಿಸುವುದಿಲ್ಲ ಎಂದು ನ್ಯಾಯಾಲಯ ಸಲಹೆಯನ್ನು ನೀಡಿದೆ. 
ಪ್ರಕರಣ ಬೆಳಗ್ಗೆ ವಿಚಾರಣೆಗೆ ಬಂದಾಗ ಅಧಿಕಾರಿಗಳು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ, ಸಂಜೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಯನ್ನು ಖುದ್ದು ಹಾಜರಾಗುವಂತೆ ಸೂಚಿಸಿ ವಿಚಾರಣೆ ಮುಂದೂಡಿತ್ತು. 
ಸಂಜೆ ಮತ್ತೆ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಾಗ, ಗಣಿ ಮತ್ತು ಭೂ ವಿಜ್ಞಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ನ್ಯಾಯಪೀಠದ ಮುಂದೆ ಹಾಜರಾದರು. ಈ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ ಅವರು ವಾದ ಮಂಡನೆಗೆ ಉಪಸ್ಥಿತರಿದ್ದರು. 
ವಿಚಾರಣೆಗೆ ಹಾಜರಾದ ರಾಜೇಂದ್ರ ಕುಮಾರ್ ಅವರನ್ನುದ್ದೇಶಿಸಿ ಮಾತನಾಡಿದ ನ್ಯಾಯಾಲಯ, ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಕೂಗಿದರೂ ಅದನ್ನು ಸ್ವೀಕರಿಸಲು ಸರ್ಕಾರಕ್ಕೆ ಏನು ಅಡ್ಡಿಯಿದೆ? ದಿನಕ್ಕೆ ನೂರಾರು ಜನ ಮರಳು ನೀತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಹೆಚ್ಚು ಹಣ ನೀಡುತ್ತೇವೆಂದರೂ ಟೆಂಕರ್ ಏಕೆ ನಿರಾಕರಣೆ ಮಾಡಲಾಗುತ್ತಿದೆ? ನಾವಂತೂ ಇಂತಹ ಮರಳು ನೀತಿಯನ್ನು ಎಲ್ಲೂ ಕಂಡಿಲ್ಲ. ಇದು ವಾಸ್ತವಿಕವಾದುದಲ್ಲ. ಜಾರಿಗೆ ಸಾಧ್ಯವಿಲ್ಲ. ಮರಳು ನೀತಿ ಏಕಪಕ್ಷೀಯವಾಗಿದ್ದು, ನಿಮ್ಮ ಹರಾಜು ನೀತಿಯನ್ನು ಮೊದಲು ಸರಿಪಡಿಸಬೇಕು. ಎಲ್ಲರಿಗೂ ಮರಳು ಸಿಗಬೇಕೆಂದಿದ್ದರೆ ಮೊದಲು ನಿಮ್ಮ ನೀತಿಯನ್ನು ಬದಲಾಯಿಸಿ, ಇಂದಿರಾ ಕ್ಯಾಂಟೀನ್, ಇಲ್ಲವೇ ಪಡಿತನ ಧಾನ್ಯ ರೀತಿಯಲ್ಲಿ ಮರಳನ್ನೂ ಹಂಚಿ ಎಂದು ಎಂದು ಕೆಂಡಕಾರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com